ಸುಳ್ಯ- ಕಾಂಗ್ರೆಸ್‌ ಪಕ್ಷದ ವತಿಯಿಂದ ಉಚಿತ ಅಂಬ್ಯುಲೆನ್ಸ್‌ ಲೋಕಾರ್ಪಣೆ…

ಸುಳ್ಯ: ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಸುಳ್ಯ ಮತ್ತು ಕಡಬ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಕೊರೊನಾ ಸಂದರ್ಭದಲ್ಲಿ ರೋಗಿಗಳ ಅನುಕೂಲಕ್ಕಾಗಿ ತುರ್ತು ಉಚಿತ ಅಂಬ್ಯುಲೆನ್ಸ್‌ ಸೇವೆಯ ಲೋಕಾರ್ಪಣೆ ಇಂದು ನಡೆಯಿತು.
ಕೆಪಿಸಿಸಿಯ ಸುಳ್ಯ ಉಸ್ತುವಾರಿ ಜಿ.ಕೃಷ್ಣಪ್ಪ ಕೊಡುಗೆಯಾಗಿ ನೀಡಿದ ಈ ಅಂಬ್ಯುಲೆನ್ಸ್‌ ನ ಕೀ ಯನ್ನು ಸುಳ್ಯ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪಿ.ಸಿ ಜಯರಾಮ ಹಾಗೂ ಕಡಬ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುಧೀರ್ ಕುಮಾರ್‌ ಶೆಟ್ಟಿ ಅವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ.ಶಹೀದ್‌,ಎಂ.ವೆಂಕಪ್ಪ ಗೌಡ, ಧನಂಜಯ ಅಡ್ಬಂಗಾಯ, ಕೆಪಿಸಿಸಿ ಸದಸ್ಯ ಡಾ.ರಘು, ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿ ಪಿ.ಎಸ್‌. ಗಂಗಾಧರ್‌, ಸುಳ್ಯ ನ.ಪಂ ಮಾಜಿ ಅಧ್ಯಕ್ಷ ಎಸ್‌ ಸಂಶುದ್ದೀನ್‌, ಕೆ.ಎಂ ಮುಸ್ತಾಫ, ಸುಳ್ಯ ಬ್ಲಾಕ್‌ ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ಶಾಹುಲ್‌ ಹಮೀದ್‌ ಕುತ್ತಮೊಟ್ಟೆ, ಕೀರ್ತನ್ ಕೊಡಪ್ಪಾಲ , ಶಾಫಿ ಕುತ್ತಮೊಟ್ಟೆ ಉಪಸ್ಥಿತರಿದ್ದರು.
ಉಚಿತ ಅಂಬ್ಯುಲೆನ್ಸ್‌ ಸೇವೆಯ ಅಗತ್ಯವಿದ್ದವರು ಪಿ.ಸಿ ಜಯರಾಮ (ಮೊ: 9448625224 ) ಹಾಗೂ ಸುಧೀರ್ ಕುಮಾರ್‌ ಶೆಟ್ಟಿ ( 9611795566 ) ರವರನ್ನು ಸಂಪರ್ಕಿಸಬಹುದಾಗಿದೆ.

IMG 20210510 103104 300x225

IMG 20210510 103203 300x225

 

Related Articles