ಬಾಂಬರ್ ಅದಿತ್ಯರಾವ್ ನಿಂದ ಇನ್ನು ದೊಡ್ಡದಾದ ಕುಕೃತ್ಯ ನಡೆಸಲು ಪ್ಲಾನ್ – ಡಾ.ಪಿ.ಎಸ್ ಹರ್ಷಾ …
ಮಂಗಳೂರು:ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಬಾಂಬರ್ ಅದಿತ್ಯರಾವ್ , ವಿಮಾನ ನಿಲ್ದಾಣಕ್ಕೆ ಹುಸಿಬಾಂಬ್ ಕರೆ ಜೈಲು ಸೇರಿದ್ದ ವೇಳೇ ಜೈಲಿನಲ್ಲಿ ವಿಮುಖನಾಗಿ ಇನ್ನು ದೊಡ್ಡದಾದ ಕುಕೃತ್ಯ ನಡೆಸಲು ಪ್ಲಾನ್ ಹಾಕಿದ್ದ ಎಂದು ಮಂಗಳೂರು ಪೊಲೀಸ್ ಕಮಿಷನರ್ ಡಾ.ಪಿ.ಎಸ್ ಹರ್ಷಾ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಆದಿತ್ಯರಾವ್ ವಿರುದ್ಧ ಈಗಾಗಲೇ ಮೂರು ಹುಸಿಬಾಂಬ್ ಕರೆ ಮಾಡಿರೋ ಕೇಸ್ ದಾಖಲಾಗಿದೆ. ಚಿಕ್ಕಬಳ್ಳಾಪುರ ಜೈಲಿನಲ್ಲಿದ್ದ ವೇಳೆ ಮತ್ತಷ್ಟು ದೊಡ್ಡದಾದ ಕುಕೃತ್ಯ ನಡೆಸಲು ಪ್ಲಾನ್ ಹಾಕಿದ್ದ. ಇದಕ್ಕಾಗಿ ಜೈಲಿನಿಂದ ಬಿಡುಗಡೆಯಾದ ಬಳಿಕ ಹಲವಾರು ತಿಂಗಳುಗಳ ಕಾಲ ಬಾಂಬ್ ತಯಾರಿ ಬಗ್ಗೆ ರಿಸರ್ಚ್ ಮಾಡಿದ್ದ. ತಂತ್ರಜ್ಞಾನದ ಅತೀವ ಜ್ಞಾನ ಹೊಂದಿದ್ದ ಈತ ವೆಬ್ ಸೈಟ್ ಗಳ ಮುಖಾಂತರ ಬಾಂಬ್ ತಯಾರಿಕೆ ಬಗ್ಗೆ ಮಾಹಿತಿ ಪಡೆಯುತ್ತಿದ್ದ.
ಕುಡ್ಲ ಹೊಟೇಲ್ ನಲ್ಲಿ ಡಿಸೆಂಬರ್ ನಲ್ಲಿ ಕೆಲಸಕ್ಕೆ ಸೇರಿದ್ದ ಆದಿತ್ಯರಾವ್ ವಾರದ ರಜಾ ದಿನದಲ್ಲಿ ಬಾಂಬ್ ತಯಾರಿಸುತ್ತಿದ್ದ. ಈ ವೇಳೆ ಆನ್ ಲೈನ್ ನಲ್ಲಿಯೇ ಸ್ಪೋಟಕ ತಯಾರಿಗೆ ಬೇಕಾದ ಸಾಮಾಗ್ರಿ ಖರೀದಿಸಿದ್ದ. ಆದರೆ ಕೊನೆಗೆ ಸಿಕ್ಕಿಬೀಳುವ ಭಯದಲ್ಲಿ ಮಂಗಳೂರಿನ ಹೊಟೇಲ್ ಜಾಬ್ ಬಿಟ್ಟು ಕಾರ್ಕಳದಲ್ಲಿರುವ ಹೊಟೇಲ್ ನಲ್ಲಿ ಕೆಲಸಕ್ಕೆ ಸೇರಿದ್ದ. ಆದಿತ್ಯರಾವ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸುವ ಮುನ್ನ ಎರಡು ಮೂರು ಬಾರಿ ಭೇಟಿ ಕೊಟ್ಟು ಏರ್ ಪೋರ್ಟ್ ಸುತ್ತಮುತ್ತಲಿನ ಸ್ಥಳದ ಬಗ್ಗೆ ಮಾಹಿತಿ ಕಲೆಹಾಕಿದ್ದ ಎಂದು ಆತ ಪೊಲೀಸರಿಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾನೆ ಎಂದು ಆಯುಕ್ತರು ತಿಳಿಸಿದ್ದಾರೆ.
ಆದಿತ್ಯರಾವ್ ವಿರುದ್ಧ ಎರಡು ಗಂಭೀರ ಪ್ರಕರಣಗಳು ದಾಖಲು ಮಾಡಲಾಗಿದ್ದು, ಉಗ್ರ ಚಟುವಟಿಕೆಯ ಕೇಸ್ ಹಾಕಲಾಗಿದೆ. ಈಗಾಗಲೇ ಆತನ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಗುರುವಾರ ಸಂಜೆಯೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ನೀಡುವಂತೆ ನಾವು ಮನವಿ ಮಾಡುತ್ತೇವೆ. ಇನ್ನು ವಿಮಾನ ನಿಲ್ದಾಣದಲ್ಲಿ ದೊರೆತ ಬಾಂಬ್ ನ ಅವಶೇಷಗಳನ್ನು FSL ಗೆ ಕಳುಹಿಸಲಾಗಿದೆ ಎಂದು ಪ್ರಕರಣದ ಕುರಿತಂತೆ ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.