ಅಭಯ ನೀಡಮ್ಮ…

ಅಭಯ ನೀಡಮ್ಮ…

ಅಮ್ಮ ನಿನ್ನನು ಬೇಡುತಿರುವೆನು
ಶಿರವ ಬಾಗಿಯೆ ನಮಿಸುವೆ
ಕರುಣೆಯಿಂದಲೇ ವರವ ಕರುಣಿಸು
ನಿನ್ನ ನೆನಪನು ಮರೆಯದೆ

ಜಗದ ಜೀವವು ನೋವು ತಿನ್ನಲು
ಕಾಣದೇತಕೆ ತಾಯಿಯೇ
ಉಸಿರನಾಡಲು ಕಷ್ಟಪಡುತಿರೆ
ನೋಡದೇತಕೆ ಕುಳಿತಿಹೆ

ಜನರ ತಪ್ಪನು ನೀನು ಕ್ಷಮಿಸದೆ
ಜಗಕೆ ಅಭಯವ ನೀಡದೆ
ಮನುಜ ಕುಲವದು ಹಿಂಸೆ ಪಡುತಲಿ
ಬದುಕು ತಲ್ಲಣಗೊಂಡಿದೆ

ಅನ್ನದಾತೆಯೆ ಜಗದ ಮಾತೆಯೇ
ದೀನರಾಗಿಯೆ ಬೇಡಲು
ನಮ್ಮ ಬದುಕಲಿ ಸುಖವ ಹರಿಸುತ
ನಿನ್ನ ಚರಣವ ನೆನೆಯಲು


ರಚನೆ:ಡಾ. ವೀಣಾ ಎನ್ ಸುಳ್ಯ

Related Articles

Back to top button