ಒಲವ ಮಂಪರು….
ಒಲವ ಮಂಪರು….
ಕತ್ತಲು ಕವಿದರು ಏಕಾಂತ ಸುರಿದಿದೆ
ಹಾಕಿದ ಮುಸುಕಲು ಬೆಂಬಿಡದೆ ನೆಂಪುಕಾಡಿದೆ
ಜೋಂಪು ನಿದ್ದಿ ಮಾಡಲು ಬಿಡದೆ
ಒಲವ ಕಾವು ಅತಿಯಾಗಿ ಬೆವರು
ಬಟ್ಟೆಗಂಟಿದೆ ನಿದಿರೆ ಬರದೇ ಮುಸುಕು
ತೆರೆಯೇ ಗಾಳೀ ತೆರದಿ ಅವಳು ತಂಪು
ಬಿಸಿದೆ ಭಾವಗಳ ಅಲೆಯಲಿ ಅಳೆದು
ಮನವು ದಣಿದು ಭಾವದ ಗಾಳಿಯಲಿ
ತೇಲುತ ಗೇಲಿ ಮಾಡುತ ಮೋಜು ನೋಡಿದೆ
ನಗೆಯ ಬೀರಿ ನಗುವ ತೋರಿ ನಕ್ಕು
ನಗಿಸುವಂತೆ ನನ್ನಾಕೆಯ ನೆಂಪು ಕಾಡಿದೆ
ನಡು ರಾತ್ರಿಯಲಿ ಪದ್ಯ ಒಂದು
ಗ್ಯಾನಕ್ಕಬಂದು ಬರೀ ಬರೀ ಎಂದು ಹಠವ
ಹಿಡಿದಿದೆ ಪೆನ್ನು ಪುಸ್ತಕ ಗೀಚಿ ಗೀಚಿ ಹರಿದು
ಹೋಗಿದೆ ಗೆಳತಿ ನಿನ್ನ ನೆಂಪು ಮಾತ್ರ ಬೆನ್ನ
ಬಿಡದೆ ನನ್ನ ಕಾಡಿದೆ ನನ್ನ ಮನಸಾ ಸೂರೆ
ಮಾಡಿದೆ ಮದ್ಯರಾತ್ರಿ ಮಧ್ಯ ಕುಡಿದ ಸೋನೇ ಮಳೆಯೊಂದು ಸುಯ್ಯನೆಂದು ಸುರಿದು ಪ್ರೇಮ್
ದಾಹ ಇಂಗಿಸಿದೆ ಆ ತಿಂಗಳ ಕೊಡ
ಕಂಗಾಲಾಗುವಂತೆ ಮಾಡಿದೆ ನನ್ನಾಕೆ ನೆಂಪು
ಆ ಚುಕ್ಕಿಗಿಂತ ಹೊಳಪು ಎಂದು
ಈ ನನ್ನ ಮನ ಕೂಗಿ ಕೂಗಿ ಹಾಡಿದೆ
ಈ ಬದುಕು ಬಂಡಿಗೆ ಅವಳೇ
ಜೋಡಿಯಾಗಬೇಕೆಂಬ ಆಸೆ ಕುಣಿದು
ಕುಪ್ಪಳಿಸಿ ಕೇಕೆ ಹಾಕುತಿದೆ…
ರಚನೆ: ಕು| ರೇಷ್ಮಾ ಪಿ. ಕೆ.
ವಿಳಾಸ: ಸಾ!! ಅಸುಂಡಿ.
ತಾ!! ರಾಣೆಬೇನ್ನೂರು: 581115.
ಜಿಲ್ಲಾ: ಹಾವೇರಿ. ಮೊ ನಂ: 9611625725