ಪುಸ್ತಕಗಳ ಕೊಡುಗೆ…

ಹಾವೇರಿ: ಜಿಲ್ಲೆಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಹಾವೇರಿ ಜಿಲ್ಲೆಯ ಶ್ರೀ ಬಸವರಾಜ ಎಸ್ ಬಾಗೇವಾಡಿಮಠ ರವರು 101 ಕನ್ನಡ ಪುಸ್ತಕಗಳನ್ನು ನೀಡಿರುತ್ತಾರೆ.
ಇವರು ಕೊಟ್ಟಿರುವ ಸಾಹಿತ್ಯಕ್ಕೆ ಸಂಬಂಧಪಟ್ಟ ಪುಸ್ತಕಗಳು ನಮ್ಮ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗುತ್ತದೆ.ವಿದ್ಯಾದಾನ ಶ್ರೇಷ್ಠದಾನ.ಇವರ ಈ ಕಾರ್ಯ ಶ್ಲಾಘನೀಯ ಎಂದು ವಿಶ್ವ ವಿದ್ಯಾಲಯದ ಕುಲಪತಿಯಾದ ಪ್ರೊ . ಡಿ. ಬಿ. ನಾಯಕ ಹೇಳಿದ್ದಾರೆ.