ಗೂನಡ್ಕ ತೆಕ್ಕಿಲ್ ಶಾಲಾ ಪ್ರಾರಂಭೋತ್ಸವ…

ಎಸ್ಸೆಸ್ಸೆಲ್ಸಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮತ್ತು ಪೋಷಕರ ಸಭೆ...

ಸುಳ್ಯ: ಗೂನಡ್ಕ ತೆಕ್ಕಿಲ್ ಶಾಲಾ ಪ್ರಾರಂಭೋತ್ಸವ ಮತ್ತು ಎಸ್ಸೆಸ್ಸೆಲ್ಸಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಮೇ 31, 2024ರಂದು ನಡೆಯಿತು.
ಆಡಳಿತ ಮಂಡಳಿಯ ಗೌರವಾಧ್ಯಕ್ಷರಾದ ತಾಜ್ ಮಹಮ್ಮದ್, ಅಧ್ಯಕ್ಷರಾದ ಉನೈಸ್ ಪೆರಾಜೆ, ಸದಸ್ಯರಾದ ಉಮರ್ ಹಾಜಿ ಪಿ ಎ, ಎಸ್ ಡಿ ಎಂ ಸಿ ಅಧ್ಯಕ್ಷರಾದ ದಿನಕರ ಸಣ್ಣಮನೆ, ತೆಕ್ಕಿಲ್ ಪ್ರತಿಷ್ಠಾನ ಕಾರ್ಯದರ್ಶಿ ಅಶ್ರಫ್ ಗುಂಡಿ ,ಮತ್ತು ಸ್ವಾದಿಕ್ ಸರ್ ಉಪಸ್ಥಿತರಿದ್ದರು. ಪೋಷಕರು ವಿದ್ಯಾರ್ಥಿಗಳೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಎಲ್ಲರಿಗೂ ಸಿಹಿ ತಿಂಡಿ ವಿತರಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ತೇರ್ಗಡೆಯಾದ ಜುನೈಹ ತೆಕ್ಕಿಲ್ ಟಿ.ಮ್. 554 ಅಂಕ ಹಾಗೂ ಮಿಸಿರಿಯಾ 550 ಅಂಕ, ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ಆಯಿಷಾ ತೆಕ್ಕಿಲ್ ಟಿ. ಎಂ. 481 ಅಂಕ ಹಾಗೂ ಆಯಿಷತ್ ಬಿಷಾರ ಎಂ. ಯು. 468 ಅಂಕ ಮತ್ತು ಅದ್ವಿನ್ 292 ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ನಂತರ ಪೋಷಕರ ಸಭೆ ನಡೆಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಮುಂದಿನ ಯೋಜನೆಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು. ಮುಖ್ಯೋಪಾಧ್ಯಾಯರಾದ ಸಂಪತ್ ರವರು ಎಲ್ಲರನ್ನೂ ಸ್ವಾಗತಿಸಿ, ಸಹಶಿಕ್ಷಕಿ ಸಾಧಿಕಾ ರವರು ವಂದಿಸಿದರು.

whatsapp image 2024 05 31 at 5.55.11 pm

Sponsors

Related Articles

Back to top button