ಕರ್ನಾಟಕಕ್ಕೆ ಮೋದಿಯವರು ಚುನಾವಣಾ ಸಮಯದಲ್ಲಿ ಆಗಾಗ ಭೇಟಿ ಕೊಡುತ್ತಿರುವುದು ಫೋಟೋಶೂಟ್ ಗಾಗಿಯೆ?- ಕೆ.ಪಿ.ಸಿ.ಸಿ.ವಕ್ತಾರ ಟಿಎಂ ಶಹೀದ್ ತೆಕ್ಕಿಲ್ ಪ್ರಶ್ನೆ…

ಸುಳ್ಯ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಚುನಾವಣಾ ಸಮಯದಲ್ಲಿ ಕರ್ನಾಟಕಕ್ಕೆ ಆಗಾಗ ಭೇಟಿ ನೀಡುತ್ತಿರುವುದು ಯಾವ ಪುರುಷಾರ್ಥಕ್ಕೆ, ಕೇವಲ ಫೋಟೋಶೂಟ್ ಮಾಡಲಿಕ್ಕೆ ಹೊರತು ಬೇರೆ ಯಾವುದೇ ಅಭಿವೃದ್ಧಿ ಕೆಲಸಕ್ಕಾಗಿ ಅಲ್ಲ ಎಂದು ಕೆ.ಪಿ.ಸಿ.ಸಿ ಬೆಳ್ತಂಗಡಿ ಉಸ್ತುವಾರಿ ಹಾಗು ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ವ್ಯಂಗ್ಯ ಮಾಡಿದ್ದಾರೆ.
ಕರ್ನಾಟಕದಲ್ಲಿ ಅದರಲ್ಲಿಯೂ ಪ್ರಮುಖವಾಗಿ ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಜಲಪ್ರಳಯ, ನೆರೆ, ಮತ್ತು ಭೂಕಂಪ ಸಂಭವಿಸಿದಾಗ ಭೇಟಿ ನೀಡದ ಯಾವುದೇ ವಿಶೇಷ ಅನುದಾನ ನೀಡದ ಪ್ರಧಾನಿ ಮೋದಿಯವರಿಗೆ ಇದ್ದಕ್ಕಿದಂತೆಯೇ ಕರ್ನಾಟಕದ ಮೇಲೆ ಏಕೆ ಪ್ರೀತಿ ಉಕ್ಕಿತು? ಇದು ಕರ್ನಾಟಕದಲ್ಲಿ ಮುಂದೆ ನಡೆಯುವ ಚುನಾವಣೆಗೋಸ್ಕರ ಹೊರತು ಬೇರೇನು ಅಲ್ಲ ಮತ್ತು ಮೋದಿಯವರು ಆಗಾಗ ಭೇಟಿ ನೀಡುತ್ತಿರುವುದು ಅವರ ಪ್ರಧಾನ ಮಂತ್ರಿ ಹುದ್ದೆಗೆ ಅಷ್ಟು ಸಮಂಜಸವಲ್ಲ ಎಂದು ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.