ಅರ್ಚಕರಿಗೆ ಆಹಾರ ದಿನಸಿಗಳ ಕಿಟ್ ವಿತರಣೆ…

ಬಂಟ್ವಾಳ: ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಪೊಳಲಿ ಗಿರಿಪ್ರಕಾಶ್ ತಂತ್ರಿ ಮೂಲಕ ಮಂಗಳೂರು ಸಂಸತ್ ಸದಸ್ಯ ನಳಿನ್ ಕುಮಾರ್ ಕಟೀಲ್ ಶಿಫಾರಸಿನ ಮೇರೆಗೆ ಕಾರ್ಮಿಕ ಇಲಾಖೆ ವತಿಯಿಂದ ಬಂಟ್ವಾಳ ತಾಲೂಕಿನ 12ಮಂದಿ ಅರ್ಚಕರಿಗೆ ಕೊರೋನಾ ಪರಿಹಾರವಾಗಿ ಆಹಾರ ದಿನಸಿಗಳ ಕಿಟ್ ಗಳನ್ನು ವಿತರಿಸಲಾಯಿತು.
ಜಿಲ್ಲಾ ಅರ್ಚಕರು ಮತ್ತು ಪುರೋಹಿತರ ಪರಿಷತ್ತು ಅಧ್ಯಕ್ಷರಾದ ಪಿ ಕೃಷ್ಣರಾಜ ಭಟ್, ಬಂಟ್ವಾಳ ತಾಲೂಕು ಸಂಯೋಜಕರಾದ ಎo ಸುಬ್ರಮಣ್ಯ ಭಟ್, ತಾಲೂಕು ಸಂಘಟನಾ ಕಾರ್ಯದರ್ಶಿ ಎರುಂಬು ಬಾಲಕೃಷ್ಣ ಕಾರಂತ ಮೊದಲಾದವರು ಅರ್ಹ ಫಲಾನುಭವಿಗಳಿಗೆ ಕಿಟ್ ಗಳನ್ನು ಹಸ್ತಾಂತರಿಸಿದರು.