ತುಂಬೆ – ಶ್ರೀ ಶಾರದಾ ಸಮುದಾಯ ಭವನ ಲೋಕಾರ್ಪಣಾ ಕಾರ್ಯಕ್ರಮ…
ಶಾಂತಿ ಪ್ರಿಯ ನಾಡಿನಲ್ಲಿ ಎಲ್ಲರನ್ನು ಗೌರವಿಸುವ ಗುಣ ನಮ್ಮದಾಗಲಿ: ಡಾ ಎಂ ಎನ್ ರಾಜೇಂದ್ರ ಕುಮಾರ್...

ಬಂಟ್ವಾಳ: ತುಂಬೆ ರಾಮಲ್ ಕಟ್ಟೆ ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ.) ಶ್ರೀ ಶಾರದಾ ರಜತ ಮಹೋತ್ಸವ ಸಮಿತಿ ಇದರ ವತಿಯಿಂದ ತುಂಬೆ ಶ್ರೀರಾಮ ನಗರ ರಾಮಲ್ ಕಟ್ಟೆಯಲ್ಲಿ ಸುಮಾರು 1.5ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಶಾರದಾ ಸಮುದಾಯ ಭವನವನ್ನು ಸೆ 28ರಂದು ಆದಿತ್ಯವಾರ ಮಂಗಳೂರು ಎಸ್ ಸಿ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷರಾದ ಡಾ ಎಂ ಎನ್ ರಾಜೇಂದ್ರ ಕುಮಾರ್ ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಶಾಂತಿ ಪ್ರಿಯರಾದ ನಾವು ಎಲ್ಲರನ್ನು ಪ್ರೀತಿಸಿ ಗೌರವಿಸಿ,ಸಮಾಜವನ್ನು ಬೆಳೆಸಿದರೆ ಯಾವುದೇ ಗೊಂದಲವಿಲ್ಲದೆ ಜೀವನ ಸಾಗಿಸಬಹುದು, ಈ ಶ್ರೀ ಶಾರದಾ ಸೇವಾ ಸಂಸ್ಥೆ ಸಮುದಾಯ ಭವನದ ಮೂಲಕ ಇನ್ನಷ್ಟು ಸಮಾಜಮುಖಿ ಕೆಲಸಗಳನ್ನು ನಡೆಸಲಿ ಎಂದು ಹೇಳಿ ರೂ 6 ಲಕ್ಷವನ್ನು ಸಂಸ್ಥೆಗೆ ದೇಣಿಗೆಯನ್ನು ಘೋಷಿಸಿದರು, ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಊರಿಗೆ ಊರೇ ಒಟ್ಟಾದರೆ ಸಂಕಲ್ಪ ಸಿದ್ದಿಯಾಗುತ್ತದೆ, ಹಿಂದೂ ಸಮಾಜದ ಸಂಖ್ಯೆ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಹಿಂದೂ ಸಮಾಜ ಒಗ್ಗಟ್ಟಾಗಿ ಸಾಗಲು ಧಾರ್ಮಿಕ ಕಾರ್ಯಕ್ರಮಗಳು ಸಹಕಾರಿಯಾಗಲಿ ಶ್ರೀ ಶಾರದಾ ಪ್ರತಿಷ್ಠಾನದ ಮೂಲಕ ಯುವಕರ ತಂಡ ಸಮಾಜಮುಖಿ ಕಾರ್ಯಗಳೊಂದಿಗೆ ವಿಕಸಿತ ಭಾರತ ಕನಸನ್ನು ನನಸು ಮಾಡಲು ಪಣ ತೊಡೋಣ ಎಂದು ಹೇಳಿ ಸಮುದಾಯ ಭವನಕ್ಕೆ ಸರಕಾರದ ಅನುದಾನದ ಭರವಸೆಯನ್ನು ನೀಡಿದರು
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ, ಪ್ರಪಂಚಕ್ಕೆ ವಿದ್ಯೆ ನೀಡುವ ಕೇಂದ್ರ ಭಾರತ, ಪುಣ್ಯ ಭೂಮಿ, ತಪೋಭೂಮಿಯಾದ ಇಲ್ಲಿ ಜನಿಸಿದ ನಾವು ಧನ್ಯರು, ಬಡವರಿಗೆ ಸಹಾಯ ಮಾಡುವ ಗುಣ ನಮ್ಮದಾಗಲಿ ಎಂದು ಹೇಳಿದರು.
ಕರ್ನಾಟಕ ದಕ್ಷಿಣ ವಿ ಹೆಚ್ ಪಿ ಸಹ ಕಾರ್ಯದರ್ಶಿ ಶರಣ್ ಪಂಪವೆಲ್ ಮಾತನಾಡಿ, ಹಿಂದೂ ಸಮಾಜ ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ತುಂಬೆ ಸಮುದಾಯ ಭವನದ ಮೂಲಕ ಶಕ್ತಿಕೇಂದ್ರವಾಗಲಿ, ಎಂದು ಹೇಳಿದರು.
ವೇದಿಕೆಯಲ್ಲಿ ರೇಖಾ ಬಿ ಆಳ್ವ ಪೇರ್ಲಬೈಲು, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಶಶಿಕುಮಾರ್ ಕುಮಾರ್ ರೈ ಬಾಲ್ಯಟ್ಟು ಡಿ ಸಿ ಸಿ ಬ್ಯಾಂಕ್ ನಿರ್ದೇಶಕರು, ಜಿ ಪಂ ಮಾಜಿ ಸದಸ್ಯ ಸಂತೋಷ್ ಕುಮಾರ್ ರೈ ಬೋಲ್ಯಾರ್,ಉದ್ಯಮಿ ಭುವನೇಶ್ ಪಚ್ಚಿನಡ್ಕ,ಉದ್ಯಮಿ ಅಜಿತ್ ಚೌಟ ದೇವಸ್ಯ, ಉದ್ಯಮಿ ಮಹಾಬಲ ಕೊಟ್ಟಾರಿ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಿ ಎನ್ ರವೀಂದ್ರ ಚರ್ಟೆಡ್ ಇಂಜಿನಿಯರ್,ಜಗದೀಶ ಆಳ್ವ ಕುವೆತ್ತ ಬೈಲು ಅಧ್ಯಕ್ಷರು ಬಾ ಜ ಪಾ ಮಂಗಳೂರು, ಸೀತಾರಾಮ, ಮಹೇಶ್ ಜೋಗಿ ಜಿಲ್ಲಾಧ್ಯಕ್ಷರು ಹಿಂದುಳಿದ ಮೋರ್ಚಾ ದ ಕ, ಮಾಜಿ ಜಿ ಪಂ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ತುಂಬೆ, ಸೌಮ್ಯ ಆರ್ ಶೆಟ್ಟಿ, ಕಾರ್ಯದರ್ಶಿ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ದೇರಳಕಟ್ಟೆ,ಸೌರಭ್ ಶೆಟ್ಟಿ ಗುರ್ಮೆ, ಪ್ರಕಾಶ್ ಚಂದ್ರ ರೈ ದೇವಸ್ಯ, ಉದ್ಯಮಿ ಉಮೇಶ್ ಸಾಲ್ಯಾನ್ ಬೆಂಜನಪದವು, ಬೂಡಾ ಅಧ್ಯಕ್ಷ ಬೇಬಿ ಕುಂದರ್, ಪೊಳಲಿ ಗಿರಿಪ್ರಕಾಶ ತಂತ್ರಿ,ಚಂದ್ರಶೇಖರ ಗಾಂಭೀರ, ಶಶಿಧರ ಬ್ರಹ್ಮರಕೊಟ್ಲು, ಗೋಪಾಲ್ ಮೈಂದನ್ ತುಂಬೆ, ದಿವಾಕರ ಪಂಬದಬೆಟ್ಟು, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಉದ್ಯಮಿ ಜಯಪ್ರಕಾಶ ತುಂಬೆ,ಉಮೇಶ್ ಶೆಟ್ಟಿ ಬರ್ಕೆ,ಉದ್ಯಮಿ ದಯಾನಂದ ರೈ ಪ್ರಿಯಾ ಸುನಿಲ್, ಶ್ರೀ ಶಾರದಾ ರಜತ ಮಹೋತ್ಸವದ ಸಮಿತಿಯ ಅಧ್ಯಕ್ಷ ರಾಘವ ಬಂಗೇರ ಪೇರ್ಲಬೈಲು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶ್ರೀ ಶಾರದಾ ಸಮುದಾಯ ಭವನದ ನಿರ್ಮಾಣಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು.
ಪ್ರಮುಖರಾದ ಶ್ರೀ ಶಾರದಾ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ, ಪದಾಧಿಕಾರಿಗಳಾದ ಕುಮುದಾಕ್ಷ ತುಂಬೆ, ಜಗದೀಶ ಪೂಜಾರಿ ಕುಮ್ಡೇಲ್, ಯೋಗೀಶ್ ಕೋಟ್ಯಾನ್ ಕುಮ್ಡೇಲ್, ವಿನೋದ್ ಬೊಳ್ಳಾರಿ, ರಾಮಚಂದ್ರ ಸುವರ್ಣ ತುಂಬೆ, ವಿಜಯ್ ಕಜೆಕಂಡ, ದಿವಾಕರ ಪೇರ್ಲಬೈಲು, ಸುಶಾನ್ ಆಚಾರ್ಯ ಬೊಳ್ಳಾರಿ, , ಜಗನ್ನಾಥ ಸಾಲಿಯಾನ್ ತುಂಬೆ, ಪ್ರಶಾಂತ್ ಕೊಟ್ಟಾರಿ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ಶಾರದಾ ರಜತ ಸಂಭ್ರಮ ಮಹೋತ್ಸವ ಸಮಿತಿಯ ಸಂಚಾಲಕ ತಾರಾನಾಥ ಕೊಟ್ಟಾರಿ ತೇವು ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು, ಸಂತೋಷ್ ಕೋಟ್ಯಾನ್ ತುಂಬೆ ಅಭಿನಂದನಾ ಪತ್ರ ವಾಚಿಸಿದರು, ಯೋಗೀಶ ಕಜೆಕಂಡ ಧನ್ಯವಾದವಿತ್ತು ಕಲಾವಿದ ಹೆಚ್ ಕೆ ನೈನಾಡ್ ಕಾರ್ಯಕ್ರಮ ನಿರೂಪಿಸಿದರು.