ಶ್ರೀ ಮಂತ್ರ ದೇವತಾ ಕ್ಷೇತ್ರ ಸಾನಿಧ್ಯ ಕಟ್ಟೆಮಾರು ವಾರ್ಷಿಕೋತ್ಸವ…

ಬಂಟ್ವಾಳ: ದೈವ ಆರಾಧನೆ ಮೂಲಕ ಹಿಂದೂ ಸಮಾಜದ ಕುಟುಂಬಗಳು ಒಗ್ಗಟ್ಟಿನಿಂದ ಇರಲು ಸಾಧ್ಯವಾಗಿದೆ. ಅಂತಹ ದೈವರಾದನೆಯ ಮೂಲ ಕಟ್ಟುಪಾಡುಗಳಿಗೆ ಚುತಿ ಬಾರದ ರೀತಿಯಲ್ಲಿ ದೈವರಾಧನೆ ನಡೆಸಿಕೊಂಡು ಬರುತ್ತಿರುವ ಮಂತ್ರ ದೇವತಾ ಸಾನಿಧ್ಯ ಎಲ್ಲಾ ದೈವ ಆರಾಧನಾ ಕೇಂದ್ರಗಳಿಗೆ ಮಾದರಿಯಾಗಿದೆ ಎಂದು ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದ ಪರಮಪೂಜ್ಯ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಬಂಟ್ವಾಳ ತಾಲೂಕು ಆಮ್ಟೂರ್ ಗ್ರಾಮದ ಶ್ರೀ ಮಂತ್ರ ದೇವತಾ ಕ್ಷೇತ್ರ ಸಾನಿಧ್ಯ ಕಟ್ಟೆಮಾರು ಇಲ್ಲಿನ ವಾರ್ಷಿಕೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮೋಹನ್ ರಾಜ್ ಚೌಟ ಪುಂಚೋಳಿಮಾರು ಗುತ್ತು ವಹಿಸಿದ್ದರು.
ಈ ಸಂದರ್ಭದಲ್ಲಿ ಮಂತ್ರ ದೇವತಾ ಜನಸೇವಾ ಟ್ರಸ್ಟ್ ವತಿಯಿಂದ ಹಾಗೂ ಮಂತ್ರ ದೇವತಾ ಕ್ಷೇತ್ರ ಸಾನಿಧ್ಯ ವತಿಯಿಂದ ಅಸಕ್ತರನ್ನು ಗುರುತಿಸಿ ಧನಸಹಾಯ ನೀಡಲಾಯಿತು. ಹಾಗೂ ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿ ಪಡೆದವರನ್ನು ಗುರುತಿಸಿ ಅಭಿನಂದಿಸಲಾಯಿತು.
ಸ್ವಾಮೀಜಿಯವರ ದಿವ್ಯ ಹಸ್ತದಲ್ಲಿ ಮಂತ್ರ ದೇವತೆ ಸಂಬಂಧಪಟ್ಟ ಆಲ್ಬಮ್ ಸಾಂಗ್ ಬಿಡುಗಡೆ ಮಾಡಲಾಯಿತು.
ವೇದಿಕೆಯಲ್ಲಿ ಭಾರತ್ ಗ್ಲಾಸ್ ಅಂಡ್ ಕ್ರಾಕರಿಸ್ ಸಿಯಾನ ಚಿಕ್ಕನ್ ಕಾನ್ಸೆಪ್ಟ್ ಮ್ಯನಿಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್ ಇದರ ಶ್ರೀ ಪಿ ಜಗದೀಶ್ ಕುಮಾರ್ ಮತ್ತು ಶ್ರೀಮತಿ ಸ್ನೇಹ ಜಗದೀಶ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಬಂಟ್ವಾಳದ ಎ ಇ ಇ ಶ್ರೀ ತಾರನಾಥ ಸಾಲಿಯಾನ್ ಪಿ, ಎ ಪಿ ಎಂ ಸಿ ಸಕಲೇಶಪುರ ಇದರ ಮಾಜಿ ಅಧ್ಯಕ್ಷ ರಂಜೇಶ್, ಚಲನಚಿತ್ರ ನಟಿ ನವ್ಯ ಪೂಜಾರಿ, ವಿಶಾಖ ಶೆಟ್ಟಿ ಮುಂಬೈ, ಶ್ರೀಮತಿ ಮೀಶಲಾಕ್ಷಿ ಎನ್ ಬೆಂಗಳೂರು, ಗಣೇಶ್ ಇಂಡಸ್ಟ್ರೀಸ್ ದೇರಳಕಟ್ಟೆ ಯ ಶರತ್ ರಾಜ್ ಶೆಟ್ಟಿ, ವಿಜಯಕುಮಾರ್ ಬೆಳ್ತಂಗಡಿ, ಯಾದವ ಬಾಣಬೆಟ್ಟು, ಮುಂಬೈಯ ಉದ್ಯಮಿ ಹರೀಶ್ ಶೆಟ್ಟಿ, ಅಶೋಕ ಕರ್ಕೇರ ಸಜೀಪ, ಯಶವಂತ ಬಂಗೇರ ಕಾಪು, ಪಂಜಿಕಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಸಂಜೀವ ಪೂಜಾರಿ, ಚೆನ್ನಪ್ಪ ಕೋಟ್ಯಾನ್, ಸುಪ್ರೀತ್ ಶೆಟ್ಟಿ ಬಾಳೆಹೊನ್ನೂರು, ಪಿ ಸಿ ಜಯರಾಮ್ ಸುಳ್ಯ, ಕಿಶೋರ್ ಕುಮಾರ್ ಕಟ್ಟೆ ಮಾರ್, ಮೊದಲಾದವರು ಉಪಸ್ಥಿತರಿದ್ದರು.
ಮಂತ್ರ ದೇವತಾ ಸಾನಿಧ್ಯದ ಧರ್ಮದರ್ಶಿ ಶ್ರೀ ಮನೋಜ್ ಕುಮಾರ್ ಸ್ವಾಗತಿಸಿ, ವಸಂತ ಪೂಜಾರಿ ಬಟ್ಟಹಿತ್ತಿಲು ವಂದಿಸಿದರು, ದಿನೇಶ್ ರಾಯೀ ಕಾರ್ಯಕ್ರಮ ನಿರ್ವಹಿಸಿದರು.
ನಂತರ ಮಾಣಿಲ ಶ್ರೀ ಮೋಹನ್ ದಾಸ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶ್ರೀ ಮಂತ್ರ ದೇವತೆಗೆ ವಿಶೇಷವಾಗಿ ದೊಂದಿ ಬೆಳಕಿನಲ್ಲಿ ನಡ್ತನಸೇವೆ ಜರಗಿತು.

whatsapp image 2023 02 27 at 11.38.29 am (1)
Sponsors

Related Articles

Back to top button