ಪೀಸ್ ಸ್ಕೂಲ್ ನಲ್ಲಿ ಸಂಭ್ರಮದ ವಾರ್ಷಿಕ ಕ್ರೀಡಾಕೂಟ…
ಪೀಸ್ ಸ್ಕೂಲ್ ಮುಖಾಂತರ ಪೈಚಾರಿನಲ್ಲಿ ಶೈಕ್ಷಣಿಕ ಕ್ರಾಂತಿ- ಟಿ ಎಂ ಶಾಹಿದ್ ತೆಕ್ಕಿಲ್...
ಸುಳ್ಯ: ಪೀಸ್ ಸ್ಕೂಲ್ (ರಿಸೈಟ್ ಇಸ್ಲಾಮಿಕ್ ಸ್ಕೂಲ್) ನಲ್ಲಿ ಸಂಭ್ರಮದ ವಾರ್ಷಿಕ ಕ್ರೀಡಾಕೂಟವು ಜರುಗಿತು ನ.21 ರಂದು ಉದ್ಘಾಟನೆಗೊಂಡು ನ. 22 ರಂದು ಸಮಾಪನಗೊಂಡಿತು.
ಸುಳ್ಯದ ಉದ್ಯಮಿಯಾದಂತಹ ಅಬ್ದುಲ್ಲಾ ಪಿಎಂ ರವರು ಕ್ರೀಡಾಕೂಟವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಕೆ. ಅಬೂಬಕರ್, ಸಂಚಾಲಕರಾದ ಸಂಶುದ್ದೀನ್ ಕೆ., ಕಾರುಣ್ಯ ಚಾರಿಟೇಬಲ್ ಪೌಂಡೇಶನ್, ಪೈಚಾರ್ ಇದರ ಅಧ್ಯಾಕ್ಷರಾದ ಆರ್. ಬಿ. ಬಶೀರ್, ಫಾರೂಕ್ ಪೈಚಾರ್, ಮೊಹಮ್ಮದ್ ಬಿ.ಎಸ್ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ಮುಹಮ್ಮದ್ ಸೈಫುಲ್ಲಾ ಮುಂತಾದವರು ಉಪಸ್ಥಿತರಿದ್ದರು.
ಶಾಲಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಏಳನೇ ತರಗತಿಯ ಇಶಲ್ ಮರ್ಯಮ್ ಕಿರಾತ್ ಪರಿಸಿದರು. ಶಿಕ್ಷಕಿಯರಾದ ತಾಹಿರ ಮತ್ತು ಮಮ್ತಾಜ್ ಕಾರ್ಯಕ್ರಮ ನಿರೂಪಿಸಿದರು. ಅತ್ಯಂತ ಉತ್ಸಾಹದೊಂದಿಗೆ ಎಲ್ಲಾ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದರು.
ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಶ್ರೀ ಟಿ. ಎಮ್. ಶಹೀದ್ ತೆಕ್ಕಿಲ್ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಸಭಿಕರನ್ನುದ್ದೇಶಿಸಿ ಮಾತನಾಡಿದ ಅವರು ಶಾಲೆಯ ಶಿಸ್ತುಬದ್ದತೆಯನ್ನು ಶ್ಲಾಘಿಸಿ, ಸಂಸ್ಥೆಯು ಮತ್ತಷ್ಟು ಉತ್ತುಂಗಕ್ಕೇರಲಿ, ಈ ಪರಿಸರದ ಯುವಕರ ಒಗ್ಗಟ್ಟು, ಸಮಾಜ ಸೇವೆ, ಸ್ವಉದ್ಯೋಗ ಮತ್ತು ಇದೀಗ ಶಿಕ್ಷಣ ಕ್ಷೇತ್ರಕ್ಕೆ ಕೈ ಹಾಕಿದ್ದು ಮುಂದೆ ಈ ಪರಿಸರದಲ್ಲಿ ಕಾಲೇಜು ಮತ್ತಿತರ ಶಿಕ್ಷಣ ಸಂಸ್ಥೆ ಹುಟ್ಟಿಕೊಂಡು ಶೈಕ್ಷಣಿಕವಾಗಿ ಕ್ರಾಂತಿಕಾರಿ ಬದಲಾವಣೆ ಆಗಲಿ ಎಂದು ಹಾರೈಸಿದರು. ಶಾಲೆಯ ದೈಹಿಕ ಶಿಕ್ಷಕ ಚಂದ್ರಶೇಖರ್ ಅವರನ್ನು ಯಶಸ್ವೀ ಕ್ರೀಡಾಕೂಟದ ಆಯೋಜನೆಗಾಗಿ ಅಭಿನಂದಿಸಲಾಯಿತು. ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯ ಉದ್ಯಮಿ ಸಿದ್ದೀಕ್ ಕೊಕೋ, ಅಬ್ದುರ್ರಝಾಕ್, ಶಾಲೆಯ ಅರೇಬಿಕ್ ವಿಭಾಗದ ಮುಖ್ಯಸ್ಥ ಹಸೈನಾರ್ ಸ್ವಲಾಹಿ, ಸಿಯಾದ್, ಹನೀಫ್, ಮುನೀರ್ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕಿಯರಾದ ಆಯಿಶಾ ಖಾತೂನ್ ಮತ್ತು ಫೈರೋಜ ಕಾರ್ಯಕ್ರಮ ನಿರೂಪಿಸಿದರು.







