ಸುಳ್ಯ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಕ್ರಿಸ್ಮಸ್ ಆಚರಣೆ…
ಸುಳ್ಯ: ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿದ್ದೋದೇಶ ಸಹಕಾರ ಸಂಘದ ಸುಳ್ಯದ ಕೇಂದ್ರ ಕಚೇರಿಯಲ್ಲಿ ನಿರ್ದೇಶಕರಾದ ಜಾರ್ಜ್ ಡಿ ‘ಸೋಜ ಕನಿಕರಪಳ್ಳ ರವರ ನೇತೃತ್ವದಲ್ಲಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಯಿತು.
ಸಹಕಾರ ಸಂಘದ ಅಧ್ಯಕ್ಷರಾದ ಮಹಮ್ಮದ್ ಇಕ್ಬಾಲ್ ಎಲಿಮಲೆ ಕ್ರಿಸ್ಮಸ್ ಕೇಕ್ ಕತ್ತರಿಸಿ ಸಮಸ್ತ ಕ್ರೈಸ್ತ ಬಾಂಧವರಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯವನ್ನು ಕೋರಿದರು. ನಾಡಿನ ಸಮಸ್ತ ಜನತೆ ಸೌಹಾರ್ದತೆಯಿಂದ, ಪರಸ್ಪರ ಸಹೋದರತ್ವದಿಂದ ಸಹಬಾಳ್ವೆ ನಡೆಸೋಣ ಎಂದು ತಿಳಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಕೆ. ಎಂ. ಮೊಯಿದಿನ್ ಪ್ಯಾನ್ಸಿ, ನಿರ್ದೇಶಕರಾದ ಎಸ್. ಸಂಶುದ್ದೀನ್, ಎ. ಕೆ. ಹಸೈನಾರ್ ಕಲ್ಲುಗುಡಿ, ಎಸ್. ಎಂ. ಬಾಪು ಸಾಹೇಬ್, ಕೆ. ಎಂ. ಅಬ್ದುಲ್ ಹಮೀದ್ ಬೆಳ್ಳಾರೆ, ಶ್ರೀಮತಿ ಅಮೀನ ಇಬ್ರಾಹಿಂ ಜಯನಗರ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಜ್ವಲ್ ನಾಯಕ್ ಉಪಸ್ಥಿತರಿದ್ದರು.