KCF ಒಮಾನ್ ರಬೀಅ್ 23 ಬೃಹತ್ ಮೀಲಾದ್ ಸಮಾವೇಶ…
ಒಮಾನ್: ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಒಮಾನ್ ವತಿಯಿಂದ ‘ಜಗತ್ತಿಗೆ ಕರುಣೆಯ ಪ್ರವಾದಿ’ ಎಂಬ ಶೀರ್ಷಿಕೆಯೊಂದಿಗೆ ಬೃಹತ್ ಮೀಲಾದ್ ಸಮಾವೇಶವು ದಿನಾಂಕ ಸೆ.29 ರಂದು ಅಲ್ ಫಾಮ್ ಬಾಲ್ರೂಮ್, ಝಾಕರ್ ಮಾಲ್ ಅಲ್ ಖುವೈರ್ ನಲ್ಲಿ ನಡೆಯಿತು.
ಮಕ್ಕಳ ಮೀಲಾದ್ ಸಾಂಸೃತಿಕ ಕಲರವದೊಂದಿಗೆ ಸಂಜೆ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ಮಗ್ರಿಬ್ ನಮಾಝಿನ ಬಳಿಕ ಉಸ್ತಾದರುಗಳ ನೇತೃತ್ವದಲ್ಲಿ ಬುರ್ದಾ ಹಾಗೂ ಮೌಲೂದ್ ನಡೆಯಿತು. KCF ಒಮಾನ್ ಅಧ್ಯಕ್ಷರಾದ ಜನಾಬ್ ಅಯ್ಯೂಬ್ ಕೋಡಿಯವರು ಅಧ್ಯಕ್ಷತೆ ವಹಿಸಿ,ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
KCF ಅಂತರಾಷ್ಟ್ರೀಯ ಸಮಿತಿ ಶಿಕ್ಷಣ ಕಾರ್ಯದರ್ಶಿ ಸಯ್ಯಿದ್ ಆಬಿದ್ ಆಟಕೋಯ ಅಲ್ ಐದರೂಸಿ ರವರು ದುಆ ನೆರವೇರಿಸಿದ ಕಾರ್ಯಕ್ರಮದಲ್ಲಿ KCF ಒಮಾನ್ ಐ ಟೀಮ್ ಚೇರ್ಮೇನ್ ಉಮರ್ ಸಖಾಫಿ ಎಡಪ್ಪಾಲ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಪ್ರಭಾಷಣಕಾರರಾಗಿ ಆಗಮಿಸಿದ್ದ ಬಹು| ಜುನೈದ್ ಹಿಮಮಿ ಸಖಾಫಿ – ಇಹ್ಸಾನ್ ದಾಈ ಚಿತ್ರದುರ್ಗ ಇವರು ‘ಜಗತ್ತಿಗೆ ಕರುಣೆಯ ಪ್ರವಾದಿ’ ವಿಷಯದ ಕುರಿತು ಸವಿಸ್ತಾರವಾಗಿ ಮಾತನಾಡಿದರು ಹಾಗೂ ಕೆಸಿಎಫ್ ಇಹ್ಸಾನ್ ಗಾಗಿ ಮಾಡುವ ಸೇವೆ, ಬಡವರ ಉನ್ನತಿಗಾಗಿ, ವಿಧ್ಯೆಯಿಲ್ಲದವರಿಗೆ ಅರಿವು ನೀಡಲು KCF ಇಹ್ಸಾನ್ ಗಾಗಿ ಶ್ರಮಿಸುತ್ತಿರುವುದನ್ನು ಕಣ್ಣಾರೆ ಕಂಡದ್ದನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಹಾಗೂ ನಅ್’ತೇ ಶರೀಫ್ ಮೂಲಕ ಪ್ರಖ್ಯಾತಿ ಪಡೆದ ಮುಈನ್ ಖಾದ್ರಿ ಬೆಂಗಳೂರು ಇವರು ಪ್ರವಾದಿ ಕೀರ್ತನೆಗಳಿಂದ ಸಭೀಕರ ಮನ ಸೆಳೆದರು.
KCF ಒಮಾನ್ ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಹಾಜಿ ಸುಳ್ಯ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಮಕ್ಕಳನ್ನು, ಕೆಸಿಎಫ್ ನಲ್ಲಿ ಗುರುತಿಸಿದ ಪ್ರತಿಭೆಗಳನ್ನು, ಗಣ್ಯ ವ್ಯಕ್ತಿಗಳನ್ನು ಹಾಗೂ ವಿವಿಧ ವಿಷಯಗಳಲ್ಲಿ ಒಮಾನ್ ಕನ್ನಡಿಗರಿಗೆ ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಇತರ ಅತಿಥಿಗಳಾಗಿ ಸಯ್ಯದ್ ಮುಹಮ್ಮದ್ ಆಟಕೋಯ ಅಲ್ ಐದರೂಸಿ ತಂಗಳ್ ಎಮ್ಮೆಮ್ಮಾಡು , KCF ಒಮಾನ್ ಕೋಶಾಧಿಕಾರಿ ಜನಾಬ್ ಆರಿಫ್ ಕೋಡಿ, ಜನಾಬ್ ಆಬಿದ್ ಪಾಷ, DKSC ಅಧ್ಯಕ್ಷರಾದ ಹಾಜಿ ಮೋನಬ್ಬ ಅಬ್ದುಲ್ ರಹಿಮಾನ್, ಡಾ! ಅಬ್ದುಲ್ ರಝಾಕ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮೀಲಾದ್ ಸ್ವಾಗತ ಸಮಿತಿ ಕೋಶಾಧಿಕಾರಿ ಅಬ್ದಲ್ಲತೀಫ್ ಮಂಜೇಶ್ವರ,KCF ಒಮಾನ್ ರಾಷ್ಟ್ರೀಯ ವಿಭಾಗ ವಾರು ನಾಯಕರುಗಳಾದ ಝುಬೈರ್ ಸ ಅದಿ ಪಾಟ್ರಕೋಡಿ,ಕಲಂದರ್ ಬಾಷ ತೀರ್ಥಹಳ್ಳಿ, ಇಕ್ಬಾಲ್ ಎರ್ಮಾಳ್, ಸಿದ್ದೀಕ್ ಮಾಂಬ್ಳಿ ಸುಳ್ಯ, ಇರ್ಫಾನ್ ಕೂರ್ನಡ್ಕ, ಶಫೀಕ್ ಎಲಿಮಲೆ ಸುಳ್ಯ, ಅಬ್ಬಾಸ್ ಮರ್ಕಡ ಸುಳ್ಯ, ಸಂಶುದ್ದೀನ್ ಪಾಲ್ತಡ್ಕ, ಅಶ್ರಫ್ ಕುತ್ತಾರ್,ಶಮೀರ್ ಉಸ್ತಾದ್ ಹೂಡೆ,ರಫೀಕ್ ಖಾಝಿ ಹಾಗೂ KCF ಒಮಾನ್ ರಾಷ್ಟ್ರೀಯ ನಾಯಕರು, ಝೋನ್, ಸೆಕ್ಟರ್ ನಾಯಕರು, ಸದಸ್ಯರು, ಹಿತೈಷಿಗಳು, ಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಇಹ್ಸಾನ್ ಕಾರ್ಯದರ್ಶಿ ಹಾಗೂ ಮೀಲಾದ್ ಸ್ವಾಗತ ಸಮಿತಿ ಚಯರ್ಮೆನ್ ಹಂಝ ಹಾಜಿ ಕನ್ನಂಗಾರ್ ಸ್ವಾಗತಿಸಿ, ಕನ್ವೀನರ್ ಹನೀಫ್ ಮನ್ನಾಪು ಧನ್ಯವಾದಗೈದರು.
ಕೊನೆಯಲ್ಲಿ KCF ಅಂತರಾಷ್ಟ್ರೀಯ ಸಮಿತಿ ಸದಸ್ಯರಾದ ಉಬೈದುಲ್ಲಾ ಸಖಾಫಿ ದುವಾಅ್ ನೆರವೇರಿಸಿ ಮೂರು ಸ್ವಲಾತ್ ನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.