ಅಮೃತ ಪ್ರಕಾಶ ಪತ್ರಿಕೆಯ 33ನೇ ಸರಣಿ ಕಾರ್ಯಕ್ರಮ -“ಅಂಬೆಗಾಲು ” ಚುಟುಕು ಸಂಕಲನ ಬಿಡುಗಡೆ…
ಬಂಟ್ವಾಳ:ಅಮೃತ ಪ್ರಕಾಶ ಪತ್ರಿಕೆಯ ವತಿಯಿಂದ ನಡೆಯುವ ಸರಣಿ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ 33ನೇ ಕೃತ 7ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ನಿಖಿತಾ .ಕೆ ಅವರ ಚೊಚ್ಚಲ ಚುಟುಕುಗಳ ಸಂಕಲನ “ಅಂಬೆಗಾಲು” ಮಾ.24 ರಂದು ದ.ಕ.ಜಿ.ಪ೦.ಮಾ.ಹಿ.ಪ್ರಾ. ಶಾಲೆ, ಕಲ್ಲಡ್ಕ ದಲ್ಲಿ ಬಿಡುಗಡೆಯಾಯಿತು.
ಶಾಲೆಯ ಪದವೀಧರ ಮುಖ್ಯಶಿಕ್ಷಕರಾದ ಅಬೂಬಕರ್ ಅಶ್ರಫ್ ಕೃತಿ ಬಿಡುಗಡೆಗೊಳಿಸಿದರು. ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ,ಸಾಹಿತಿ ಡಾ. ಮಾಲತಿ ಶೆಟ್ಟಿ ಮಾಣೂರು ಅಧ್ಯಕ್ಷತೆ ವಹಿಸಿದ್ದರು.ಕವಯಿತ್ರಿ ಶ್ರೀಮತಿ ಮಾನಸ ವಿಜಯಾನ೦ದ ಕೈಂತಜೆ,ಮಾಣಿ “ಅಂಬೆಗಾಲು” ಚುಟುಕು ಸಂಕಲನದ ಬಗ್ಗೆ ಮಾತನಾಡಿದರು.ಕವಯಿತ್ರಿ ಕುಮಾರಿ ನಿಖಿತಾ ಕೆ ,ಪ್ರಶಸ್ತಿ ವಿಜೇತ ಸಮಾಜ ಸೇವಕಿ ಸುಜಾತಾ ಸುವರ್ಣ,ಹಿರಿಯಸಾಹಿತಿ , ಸಂಪನ್ಮೂಲ ವ್ಯಕ್ತಿ ಮತ್ತು ಪತ್ರಕರ್ತ ಜಯಾನಂದ ಪೆರಾಜೆ ಹಾಗೂ ಅಮೃತ ಪ್ರಕಾಶ ಪತ್ರಿಕೆಯ ಉಪಸಂಪಾದಕರಾದ ಸಾಹಿತಿ, ಚಿತ್ರನಟ ಡಾ. ಕಾಸರಗೋಡು ಅಶೋಕ್ ಕುಮಾರ್ ಉಪಸ್ಥಿತರಿದ್ದರು.