ಯೆನೆಪೊಯ ತಾಂತ್ರಿಕ ಮಹಾವಿದ್ಯಾಲಯ- ರೋಟರಾಕ್ಟ್ ಕ್ಲಬ್ ನ ಪದಗ್ರಹಣ ಸಮಾರಂಭ…
ಮೂಡುಬಿದಿರೆ: ಯೆನೆಪೊಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ರೋಟರಾಕ್ಟ್ ಕ್ಲಬ್‌ನ ಪದಗ್ರಹಣ ಸಮಾರಂಭ ಡಿ. 29 ರಂದು ನಡೆಯಿತು.
ರೋಟರಾಕ್ಟ್ ಕ್ಲಬ್‌ನ ಸಭಾಪತಿ ರೊ. PHF ವಿನ್ಸೆಂಟ್ ಡಿ’ಕೋಸ್ಟಾ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ, ದೈನಂದಿನ ಜೀವನದಲ್ಲಿ ಸೇವೆಯ ಮಹತ್ವವನ್ನು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಆರ್.ಜಿ. ಡಿಸೋಜ ಮಾತನಾಡಿ, ಸಮಾಜಸೇವಾ ಕಾರ್ಯಗಳಲ್ಲಿ ಯುವಕರ ಪಾತ್ರದ ಬಗ್ಗೆ ವಿವರಿಸಿದರು. ವಿದ್ಯಾರ್ಥಿಗಳು ರೋಟರಾಕ್ಟ್ ಕ್ಲಬ್‌ನ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಅವರು ಕರೆ ನೀಡಿದರು. ಮೂಡುಬಿದಿರೆ ಟೆಂಪಲ್‌ಟೌನ್ ರೋಟರಿ ಕ್ಲಬ್‌ನ ಅಧ್ಯಕ್ಷ ರೊ. ರಮೇಶ್‌ಕುಮಾರ್ ಅವರು ಅಧ್ಯಕ್ಷತೆ ವಹಿಸಿ, ತಮ್ಮ ಸಮಾಜದ ಅಭಿವೃದ್ಧಿಗೆ ರೋಟರಿ ಕ್ಲಬ್‌ನ ಕೊಡುಗೆಗಳನ್ನು ವಿವರಿಸಿದರು.
ರೊ. ಪೂರ್ಣಚಂದ್ರ ಜೈನ್, ರೊ. ಮಂಜುನಾಥ್, ರೋಟರಾಕ್ಟ್ ಕ್ಲಬ್ ಶಿಕ್ಷಕ ಸಂಯೋಜಕ ಪ್ರೊ. ರಾಘವೇಂದ್ರ ಬಾಳಿಗಾ, ರೋಟರಾಕ್ಟ್ ಕ್ಲಬ್ ಅಧ್ಯಕ್ಷೆ ವಿದ್ಯಾರ್ಥಿನಿ ಕಾತ್ಯಾಯಿನಿ ಅನಿಲ್ ನಾಥ್ ಸಿಂಗ್, ಕಾರ್ಯದರ್ಶಿ ಸ್ವಸ್ತಿಕ್, ಖಜಾಂಜಿ ಸುಶಾಂತ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.