ಕಾವ್ಯ ಕನ್ನಿಕೆ …

ಕಾವ್ಯ ಕನ್ನಿಕೆ…
ನೀನು ಉಲಿದ ಪದಗಳದುವೆ
ನನ್ನ ಮನವ ನಾಟಲು
ಪದದ ಬಳಿಯೆ ಪದವು ನಿಂತು
ಕಾವ್ಯ ಭಾವ ತಾಳಿತು
ಪದಗಳಲ್ಲಿ ಚೆಲುವು ತುಂಬಿ
ಮೂಡಿ ಕಾವ್ಯ ಕನ್ನಿಕೆ
ಜಗದಯೆಲ್ಲ ಸೊಗವು ಸೇರಿ
ತನುಮನವನು ಮುಟ್ಟಿತು
ಬೆಳೆದು ನಿಂತ ಭಾವ ತಾನು
ಕಾವ್ಯವಾಗಿ ನಿಲ್ಲಲು
ರಾಗ ತಾಳ ಜೊತೆಗೆ ಸೇರಿ
ಭಾವಗೀತೆಯಾಯಿತು
ಬಾಳಪುಟದಿ ದಿನದಿನವೂ
ಹೊಸತು ಕಾವ್ಯ ಜನಿಸುತಾ
ಹೊಮ್ಮಿಬರಲಿ ಲೋಕ ಪ್ರೀತಿ
ಜೀವ ಮೈತ್ರಿ ಅನುದಿನಾ
ರಚನೆ: ಡಾ. ವೀಣಾ ಎನ್ ಸುಳ್ಯ
Sponsors