ಕೊರೊನ ಪತ್ತೆ – ಶಕ್ತಿನಗರ, ಕಕ್ಕೆಬೆಟ್ಟು, ಪದುವ ವಿಲೇಜ್ ಕಂಟೈನ್ ಮೆಂಟ್ ಜೋನ್….
ಮಂಗಳೂರು: ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 80 ವರ್ಷದ ಮಹಿಳೆ ಹಾಗೂ ಆಕೆಯ 45 ವರ್ಷದ ಪುತ್ರನಲ್ಲಿ ಸೋಂಕು ದೃಢವಾದ ಹಿನ್ನಲೆಯಲ್ಲಿ ಇವರಿರುವ ಶಕ್ತಿನಗರ ಕಕ್ಕೆಬೆಟ್ಟು ಪ್ರದೇಶವನ್ನು ಕಂಟೈನ್ ಮೆಂಟ್ ಜೋನ್ ಆಗಿ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ.
ಸೋಂಕಿತರ ವಾಸವಾಗಿದ್ದ ಮನೆಯಿಂದ ಸುಮಾರು 200 ಮೀ ವ್ಯಾಪ್ತಿಯನ್ನು ನಿಯಂತ್ರಿತ ವಲಯವಾಗಿ ಘೋಷಿಸಲಾಗಿದ್ದು, ಕಂಟೈನ್ ಮೆಂಟ್ ವಲಯದಲ್ಲಿ 5 ಅಂಗಡಿ/ ಕಚೇರಿಗಳು, 22 ಮನೆಗಳು, 120 ಮಂದಿ ಜನರಿದ್ದಾರೆ.
ಕಕ್ಕೆಬೆಟ್ಟುವಿನ ಸುತ್ತಮುತ್ತಲಿನ 5 ಕೀ.ಮೀ ನ್ನು ಬಫರ್ ಝೋನ್ ಎಂದು ಘೋಷಿಸಲಾಗಿದೆ. ಈ ವ್ಯಾಪ್ತಿಯಲ್ಲಿ 4800 ಮನೆ, 1350 ಅಂಗಡಿ/ ಕಚೇರಿಗಳು, 73,000 ಜನಸಂಖ್ಯೆ ಇದೆ.