ದಾವಣಗೆರೆ ದಕ್ಷಿಣ ಉಪ ಚುನಾವಣೆ- ಮತದಾರರನ್ನ ನೇರವಾಗಿ ಭೇಟಿಯಾಗುತ್ತಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್…

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕೆಪಿಸಿಸಿ ವೀಕ್ಷಕರಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗು ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಉಪ ಚುನಾವಣೆಯ ವಾರ್ಡಿನಲ್ಲಿ ಮತದಾರರನ್ನು ನೇರ ಭೇಟಿ ಮಾಡಿ ಗ್ಯಾರಂಟಿ ಯೋಜನೆ ಬಗ್ಗೆ ಸವಿಸ್ತಾರವಾಗಿ ವಿವರಿಸಿ ಬಿಜೆಪಿ ಪಕ್ಷ ಮಾಡುತ್ತಿರುವ ಅಪಪ್ರಚಾರವನ್ನು ಮತ್ತು ಗ್ಯಾರಂಟಿಗೆ ವಿರೋಧ ಮಾಡುತ್ತಿರುವುದನ್ನು ತಿಳಿಸಿ ಮತದಾರರು ಸಾಮಾನ್ಯ ಜನರು ಇಂದು ಅನುಭವಿಸುತ್ತಿರುವ ಸಮಸ್ಯಗೆ ನೇರವಾಗಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಹೊಣೆ, ಯುವಕರ ನಿರುದ್ಯೋಗ ಸಮಸ್ಯೆಗೆ ಪರಿಹಾರ ಆಗಿಲ್ಲ, ಎರಡು ಕೋಟಿ ವಾರ್ಷಿಕ ಉದ್ಯೋಗದ ಭರವಸೆಯಂತೆ ಹನ್ನೆರಡು ವರ್ಷದಲ್ಲಿ ಇಪ್ಪತನಾಲ್ಕು ಕೋಟಿ ಉದ್ಯೋಗ ಕೊಡಬೇಕಿತ್ತು.ಆದರೆ ಐವತ್ತು ಲಕ್ಷ ಉದ್ಯೋಗ ಕೂಡ ನೀಡಿಲ್ಲ ಎಂದು ವಿವರಿಸಿದರು .
ಅದಾನಿ ಅಂಬಾನಿ ಮೇಲೆ ಮಾತ್ರ ಮೋದಿ ಅವರಿಗೆ ಪ್ರೀತಿ. ಉಳಿದವರಿಗೆ ಕೇವಲ ಭಾವನೆ ಮುಖಾಂತರ ಆಕರ್ಷಿಸುತ್ತಾರೆ ಇದು ಅವರ ದೊಡ್ಡ ಸಾದನೆ ಎಂದು ತಿಳಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ್ ಅವರಿಗೆ ಮತ ಹಾಕಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮಾಜಿ ಕಾರ್ಪೋರೇಟರ್ ಚಂದ್ರು, ಮಾಜಿ ಮೇಯರ್ ವಿನಾಯಕ, ಸ್ಥಳೀಯ ಮುಖಂಡರಾದ ಶಿವಾಜಿ ,ಸಿದ್ದಪ್ಪ, ಸುದರ್ಶನ್ ,ಅಬ್ದುಲ್ ಖಾದರ್ ಮತ್ತಿತರು ಜೊತೆಗೆ ಇದ್ದರು. ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಮರಾಠ ಸಮುದಾಯದ ಸಮಾವೇಶ ನಡೆಸಿ ಮತ ನೀಡಲು ಮನವಿ ಮಾಡಿದರು.

whatsapp image 2026 04 05 at 4.32.49 pm

whatsapp image 2026 04 05 at 4.32.48 pm

Related Articles

Back to top button