ಸುಳ್ಯ- ಮೂವರು ಪತ್ರಕರ್ತರು, ಇಬ್ಬರು ಪೋಲಿಸರಿಗೆ ಕೊರೊನಾ ಪಾಸಿಟಿವ್…

ಸುಳ್ಯ : ಇಲ್ಲಿನ ಮೂವರು ಪತ್ರಕರ್ತರು ಮತ್ತು ಇಬ್ಬರು ಪೋಲಿಸರಿಗೆ ಇಂದು ಕೊರೊನಾ ಪಾಸಿಟಿವ್ ದೃಢವಾಗಿದೆ ಎಂದು ತಿಳಿದುಬಂದಿದೆ.
ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಗಳು ಜಾಲ್ಸೂರಿನಲ್ಲಿ ನಡೆದ ಕೊರೋನಾ ರಾಪಿಡ್ ಆಂಟಿಜೆನ್ ಪರೀಕ್ಷೆಯಲ್ಲಿ ತಪಾಸಣೆ ಮಾಡಿದ್ದು, ಅವರಿಗೆ ಪಾಸಿಟಿವ್ ಬಂದಿರುವುದಾಗಿ ತಿಳಿದು ಬಂದಿದೆ. ಸುಳ್ಯದ ಪತ್ರಿಕೆಯೊಂದರ ಮೂವರು ಪತ್ರಕರ್ತರಿಗೆ ಇಂದು ಕೊರೋನಾ ಸೋಂಕು ತಗುಲಿರುವುದು ವರದಿಯಾಗಿದೆ.
Sponsors