ಮಹಿಳಾ ದಿನಾಚರಣೆ…

ಬಂಟ್ವಾಳ: ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ) ಇದರ ವತಿಯಿಂದ, ಬಾಳ್ತಿಲ ಶ್ರೀಶೈಲ ಇಲ್ಲಿ ಬಹಳ ವಿಶಿಷ್ಟತೆಯನ್ನು ತೋರಿಸುವಂತಹ ಮಹಿಳಾ ದಿನಾಚರಣೆ ನಡೆಸಲಾಯಿತು.
ಸಂಸ್ಥೆಯ ಸಹಭಾಗಿತ್ವದಲ್ಲಿ ಶ್ರೀಶೈಲ ಕಲಾನೃತ್ಯ ತರಬೇತಿ ,ಭಜನೆ ತರಬೇತಿ ಕಾರ್ಯಕ್ರಮದ ಉದ್ಘಾಟ ನೆಯನ್ನು ಮಾಡಲಾಯಿತು.
ಯೋಗ ತರಬೇತಿ ಮತ್ತು ಅದರ ಉಪಯೋಗದ ಮಾಹಿತಿಯನ್ನು ಶ್ರೀಮತಿ ತುಳಸಿ ಅವರು ನಡೆಸಿಕೊಟ್ಟರು. ಮಹಿಳಾ ಆರೋಗ್ಯ ಮಾಹಿತಿ ಕಾರ್ಯಗಾರ ಅಲ್ಲದೆ , ಗ್ರಾಮೀಣ ಮಹಿಳಾ ಸಾಧಕಿ ಶ್ರೀಮತಿ ತುಳಸಿ,ಶ್ರೀಮತಿ ನೀಲಮ್ಮ,ಶ್ರೀಮತಿ ಹೊನ್ನಮ್ಮ ಇವರನ್ನು ಗೌರವಿಸಲಾಯಿತು.ಶ್ರೀಮತಿ ನೀಲಮ್ಮ ಕಾರ್ಯಕ್ರಮ ದ ಉದ್ಘಾಟನೆ ಮಾಡಿದರು. ನ್ಯಾಯವಾದಿ,ಕರ್ನಾಟಕ ಸರಕಾರದ ಪ್ರತಿಷ್ಟಿತ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತರು,ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ಇದರ ಸಂಸ್ಥಾಪಕರು ಇವರು ಅಧ್ಯಕ್ಷತೆಯನ್ನು ವಹಿಸಿಕೊಂಡರು.ಶ್ರೀಮತಿ ಶಾರದಾ ಜಿ ಬಂಗೇರ ಇವರು ಮಹಿಳೆಯರಿಗೆ ಪಾರ್ದಾನ , ಕಬಿತೆ ಯನ್ನು ಹೇಳಿದರು. ಡಾ. ರಾಜೇಶ್ ಪೂಜಾರಿ,ಭಾಸ್ಕರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶೌರ್ಯ ನಡೆಸಿಕೊಟ್ಟರು. ವಿವಿಧ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು.

whatsapp image 2023 03 16 at 11.14.04 am (1)
Sponsors

Related Articles

Back to top button