ಶ್ರೀ ಗುರು ರಾಘವೇಂದ್ರ ಸಾರ್ವಭೌಮರ 349ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆ…
ಸುರತ್ಕಲ್ : ನವ ವೃಂದಾವನ ಸೇವಾ ಪ್ರತಿಷ್ಠಾನ ಹೊಸಬೆಟ್ಟು ಶ್ರೀ ರಾಘವೇಂದ್ರ ಸ್ವಾಮಿ ಮಠ ಹೊಸಬೆಟ್ಟು ಇಲ್ಲಿ ಶ್ರೀ ಗುರು ರಾಘವೇಂದ್ರ ಸಾರ್ವಭೌಮರ 349ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆ ಕಾರ್ಯಕ್ರಮಗಳು ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ರಾಘವೇಂದ್ರ ಯಚ್ ವಿ ರವರ ನೇತೃತ್ವದಲ್ಲಿ ಆ. 4 ರಂದು ಜರಗಿತು.
ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ವಿಶೇಷ ಹೋಮ ಮತ್ತು ಕಲಶಾಭಿಷೇಕ ಹಾಗೂ ಲೋಕ ಕಲ್ಯಾಣಾರ್ಥವಾಗಿ ಕೊರೋನಾ ನಿವಾರಣೆಗಾಗಿ ಕ್ರಿಮಿಘ್ನ ಸೂಕ್ತ ಹೋಮವು ವೇದಮೂರ್ತಿ ಚಿತ್ರಾಪುರ ಕಗ್ಗಿ ಶ್ರೀನಿವಾಸ ಆಚಾರ್ಯ ಮತ್ತು ವೇದಮೂರ್ತಿ ಕೋಟೆಕಾರ್ ಶ್ರೀಕಾಂತ್ ಭಟ್ ರವರ ಪೌರೋಹಿತ್ಯದಲ್ಲಿ ಜರಗಿತು. ಶ್ರೀನಿವಾಸ ಆಚಾರ್ಯ ರವರು ಭೂಮಿಯ ಮೇಲೆ ಮಂತ್ರ ಸಹಿತ ಹೋಮಾದಿಗಳನ್ನು ಮಾಡುವುದರಿಂದ ಬೆಂಕಿಯ ಜ್ವಾಲೆಯಿಂದ ಹಾಗೂ ಹೊಗೆಯಿಂದ ಗಾಳಿಯಲ್ಲಿ ಇರುವ ಅನೇಕ ರೋಗಾಣುಗಳು ಸುಟ್ಟು ಹೋಗುತ್ತವೆ ಆಗ ಗಾಳಿಯು ಶುದ್ದವಾಗುತ್ತದೆ. ಶುದ್ದವಾದ ಗಾಳಿಯನ್ನು ಕುಡಿಯುವ ಜೀವಿಗಳು ರೋಗವಿಲ್ಲದವರಾಗುತ್ತಾರೆ. ಹಾಗಾಗಿ ಹಿಂದಿನ ಕಾಲದಲ್ಲಿ ವಾತಾವರಣ ಶುದ್ದಿಯಾಗಲೂ ಯಜ್ಞಯಾಗಾದಿಗಳನ್ನು ಮಾಡುತ್ತಿದ್ದರು. ‘ಋತು ಸಂಧಿಷು ವೈ ವ್ಯಾಧಿರ್ಜಾಯತೇ!ಋತು ಸಂಧಿಷು ಯಜ್ಞಾ; ಕ್ರಿಯಂತೇ’ ಎಂದು ಪ್ರಾರ್ಥನೆ ಸಲ್ಲಿಸಿ ಸರ್ವರಿಗೂ ಶ್ರೀ ಹರಿ ವಾಯು ಗುರುಗಳು ಆರೋಗ್ಯ ಕರುಣಿಸಲಿ ಎಂದು ಆಶೀರ್ವಚನವಿತ್ತರು.
ಈ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹೊಸಬೆಟ್ಟು ಇದರ ಅಧ್ಯಕ್ಷ ರಾದ ಶ್ರೀ ಹರಿಕೃಷ್ಣ ಸಾಲ್ಯಾನ್, ಶ್ರೀಮತಿ ಕೆ ಕಲಾವತಿ, ಶ್ರೀ ರಾಘವೇಂದ್ರ ಸ್ವಾಮಿ ಮಠದ ಮೇಲ್ವಿಚಾರಕಿ ಶ್ರೀಮತಿ ಗೌರಿ ರಾಘವೇಂದ್ರ, ಹೊನ್ನೆಕಟ್ಟೆ ನಾಗರಾಜ ರಾವ್, ಶ್ರೀ ನಾಗರಾಜ ಬಳ್ಳಕ್ಕರಾಯರು, ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿ ಹೊಸಬೆಟ್ಟು ಇದರ ಸದಸ್ಯರು, ಶ್ರೀ ರಾಘವೇಂದ್ರ ಭಕ್ತ ವೃಂದ ಸಮಿತಿ ಹೊಸಬೆಟ್ಟು ಇದರ ಸದಸ್ಯರು, ಬ್ರಾಹ್ಮಣ ಮಹಾ ಸಭಾ ಸುರತ್ಕಲ್ ವಲಯ ಇದರ ಸದಸ್ಯರು, ವೃಂದಾವನ ನಗರ ಹಿತ ವೇದಿಕೆ ಹೊಸಬೆಟ್ಟು ಇದರ ಸದಸ್ಯರು ಹಾಗೂ ಆರಾಧನಾ ಮಹೋತ್ಸವ ಸಮಿತಿಯ ಸದಸ್ಯರು ಮತ್ತು ಶ್ರೀ ರಾಘವೇಂದ್ರ ಭಕ್ತ ಬಂಧುಗಳು ಉಪಸ್ಥಿತರಿದ್ದರು.