ಶ್ರೀ ಗುರು ರಾಘವೇಂದ್ರ ಸಾರ್ವಭೌಮರ 349ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆ…
ಸುರತ್ಕಲ್: ನವ ವೃಂದಾವನ ಸೇವಾ ಪ್ರತಿಷ್ಠಾನ ಹೊಸಬೆಟ್ಟು, ಶ್ರೀ ರಾಘವೇಂದ್ರ ಸ್ವಾಮಿ ಮಠ ಹೊಸಬೆಟ್ಟು ಇಲ್ಲಿ ಶ್ರೀ ಗುರು ರಾಘವೇಂದ್ರ ಸಾರ್ವಭೌಮರ 349ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆ ಕಾರ್ಯಕ್ರಮಗಳು ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ರಾಘವೇಂದ್ರ ಯಚ್ ವಿ ರವರ ನೇತೃತ್ವದಲ್ಲಿ ಮತ್ತು ಚಿತ್ರಾಪುರ ಕಗ್ಗಿ ಶ್ರೀನಿವಾಸ ಆಚಾರ್ಯ ಮತ್ತು ವೇದಮೂರ್ತಿ ಕೋಟೆಕಾರ್ ಶ್ರೀಕಾಂತ್ ಭಟ್ ರವರ ಪೌರೋಹಿತ್ಯದಲ್ಲಿ ಆ. 5 ರಂದು ಜರಗಿತು.
ಈ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಶ್ರೀ ರಾಮ ಜನ್ಮ ಭೂಮಿ ಯಲ್ಲಿ ಶ್ರೀ ರಾಮ ದೇವರ ಭವ್ಯ ದೇಗುಲ ನಿರ್ಮಾಣಕ್ಕೆ ಭೂಮಿ ಪೂಜೆಯ ಸಲುವಾಗಿ ಸಾಮೂಹಿಕ ಪ್ರಾರ್ಥನೆಯನ್ನು ವೇದಮೂರ್ತಿ ಚಿತ್ರಾಪುರ ಶ್ರೀನಿವಾಸ ಆಚಾರ್ಯ ರವರು ನೆರವೇರಿಸಿದ್ದು ಶ್ರೀರಾಮನು ಇತಿಹಾಸ ಪುರುಷ ಭಾರತ ದೇಶದ ಆಡಳಿತ ಬ್ರಿಟಿಷರಿಂದ ಮರಳಿ ಬಂದಂತೆ ಶ್ರೀರಾಮನ ಜನ್ಮ ಭೂಮಿ ಪವಿತ್ರ ವಾದ ಅಯೋಧ್ಯೆಯು ಹಲವು ವರ್ಷದ ಹೋರಾಟದ ನಂತರ ಹಿಂದೂ ಆಸ್ತಿಕ ಬಾಂಧವರಿಗೆ ಮರು ಒದಗಿ ಬಂದಿದೆ. ಶ್ರೀ ರಾಘವೇಂದ್ರ ಸ್ವಾಮಿಗಳು ಆರಾಧಿಸಿದ ಮೂಲ ಶ್ರೀ ರಾಮಚಂದ್ರ ದೇವರ ನಿಷ್ಕಲ್ಮಶ ಭಕ್ತಿಗೆ ಮತ್ತು ಶ್ರೀ ರಾಮಚಂದ್ರ ದೇವರ ಕೃಪೆಗೆ ಪಾತ್ರ ರಾಗಲು ಒಳ್ಳೆಯ ಅವಕಾಶ ಎಂದು ಆಶೀರ್ವಚನವಿತ್ತರು.
ಉಡುಪಿ ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರ ಅನುಗ್ರಹ ಸಂದೇಶ ವನ್ನು ಶ್ರೀ ನಾಗರಾಜ ಆಚಾರ್ಯ ರವರು ನೀಡಿದ್ದು ಶ್ರೀ ರಾಮಚಂದ್ರ ದೇವರು ಮರ್ಯಾದಾ ಪುರುಷೋತ್ತಮ ಅವರ ತತ್ವ ಆದರ್ಶ ಗಳು ಅನುಕರಣೀಯ ಎಂದು ಜ್ಯೋತಿ ಬೆಳಗಿಸಿ ಆಶೀರ್ವಚನವಿತ್ತರು.
ಈ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹೊಸಬೆಟ್ಟು ಇದರ ಅಧ್ಯಕ್ಷ ರಾದ ಶ್ರೀ ಹರಿಕೃಷ್ಣ ಸಾಲ್ಯಾನ್, ಶ್ರೀಮತಿ ಕೆ ಕಲಾವತಿ, ಶ್ರೀ ರಾಘವೇಂದ್ರ ಸ್ವಾಮಿ ಮಠದ ಮೇಲ್ವಿಚಾರಕಿ ಶ್ರೀಮತಿ ಗೌರಿ ರಾಘವೇಂದ್ರ, ಹೊನ್ನೆಕಟ್ಟೆ ನಾಗರಾಜ ರಾವ್, ಶ್ರೀ ನಾಗರಾಜ ಬಳ್ಳಕ್ಕರಾಯರು,ಶ್ರೀನಿವಾಸ ಕುಳಾಯಿ, ಶ್ರೀ ವಿಶ್ವೇಶ್ವರ ಬದವಿದೆ ಹೊಸಬೆಟ್ಟು, ಶ್ರೀ ರಾಘವೇಂದ್ರ ಯಚ್ ವಿ, ಶ್ರೀ ಬಿ ಗೋಪಾಲ ಕೃಷ್ಣ ರಾವ್, ಶ್ರೀ ಅನಂತ ಬೈಪಾಡಿತ್ತಾಯ, ಶ್ರೀ ಸುಬ್ರಹ್ಮಣ್ಯ ಶಿಬರೂರು, ಶ್ರೀ ಕಿಶೋರ್ ಶೆಟ್ಟಿ ಶಿಬರೂರು, ಶ್ರೀಮತಿ ಚಂದ್ರಿಕಾ ಭಾಸ್ಕರ ಭಟ್ ಪಂಜ, ಶ್ರೀ ಯಜ್ಞೆಶ್ ಹೊಸಬೆಟ್ಟು, ಶ್ರೀ ಬಾಬು ಗೌಡ ಬಲ್ನಾಡ್, ಶ್ರೀ ಸುಂದರ, ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿ ಹೊಸಬೆಟ್ಟು ಇದರ ಸದಸ್ಯರು, ಶ್ರೀ ರಾಘವೇಂದ್ರ ಭಕ್ತ ವೃಂದ ಸಮಿತಿ ಹೊಸಬೆಟ್ಟು ಇದರ ಸದಸ್ಯರು, ಬ್ರಾಹ್ಮಣ ಮಹಾ ಸಭಾ ಸುರತ್ಕಲ್ ವಲಯ ಇದರ ಸದಸ್ಯರು, ವೃಂದಾವನ ನಗರ ಹಿತ ವೇದಿಕೆ ಹೊಸಬೆಟ್ಟು ಇದರ ಸದಸ್ಯರು ಹಾಗೂ ಆರಾಧನಾ ಮಹೋತ್ಸವ ಸಮಿತಿಯ ಸದಸ್ಯರು ಮತ್ತು ಶ್ರೀ ರಾಘವೇಂದ್ರ ಭಕ್ತ ಬಂಧುಗಳು ಉಪಸ್ಥಿತರಿದ್ದರು.