ಸುಳ್ಯ- ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್‌ ವತಿಯಿಂದ ಪತ್ರಿಕಾ ದಿನಾಚರಣೆ…

ಸುಳ್ಯ: ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್‌ ಸುಳ್ಯ ತಾಲೂಕು ಘಟಕದ ವತಿಯಿಂದ ಪತ್ರಿಕಾ ದಿನಾಚರಣೆಯು ಶ್ರೀಹರಿ ಕಾಂಪ್ಲೆಕ್ಸ್‌ ನಲ್ಲಿರುವ ರಂಗಮಯೂರಿ ಕಲಾಶಾಲೆಯ ಸಭಾಭವನದಲಿ ಜು.29ರಂದು ಜರುಗಿತು.
ಕಾರ್ಯಕ್ರಮವನ್ನು ಪತ್ರಕರ್ತ ಮಹೇಶ್‌ ಪುಚ್ಚಪ್ಪಾಡಿ ಉದ್ಘಾಟಿಸಿದರು. ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್‌ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಉಮೇಶ್‌ ಮಣಿಕ್ಕಾರ ಅಧ್ಯಕ್ಷತೆ ವಹಿಸಿದ್ದರು.
ಪತ್ರಿಕಾ ದಿನಾಚರಣೆಯಲ್ಲಿ ಸನ್ಮಾನಿತಗೊಳ್ಳಲಿರುವ ಪತ್ರಕರ್ತೆ, ಲೇಖಕಿ ಶ್ರೀಮತಿ ಹೇಮಾ ವೆಂಕಟ್‌ ಮೋಂಟಡ್ಕ, ಪತ್ರಿಕಾ ವಿತರಕ ಪ್ರಭಾಕರ ಕಳಂಜ, ಮುಖ್ಯ ಅತಿಥಿಗಳಾದ ಸಿ.ಡಿ.ಪಿ.ಒ. ಶ್ರೀಮತಿ ರಶ್ಮಿ ಅಶೋಕ್‌ ನೆಕ್ರಾಜೆ, ಬೆಳ್ಳಾರೆ ವಾಣಿಜ್ಯ ವರ್ತಕರ, ಕೈಗಾರಿಕಾ ಸಂಘದ ಅಧ್ಯಕ್ಷ ಮಾಧವ ಗೌಡ ಕಾಮಧೇನು, ರಂಗಮಯೂರಿಯ ಲೋಕೇಶ್‌ ಊರುಬೈಲು, ದ.ಕ. ಜಿಲ್ಲಾ ಜರ್ನಲಿಸ್ಟ್‌ ಯೂನಿಯನ್‌ ಅಧ್ಯಕ್ಷ ಹರೀಶ್‌ ಬಂಟ್ವಾಳ್‌, ಸುಳ್ಯ ತಾಲೂಕು ಘಟಕದ ಕಾರ್ಯದರ್ಶಿ ಯಶ್ವಿತ್‌ ಕಾಳಮ್ಮನೆ, ಖಜಾಂಜಿ ಶ್ರೀಧರ ಕಜೆಗದ್ದೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Sponsors

Related Articles

Back to top button