ಬೋಯಿಕೇರಿ ಸಮೀಪ ನಡೆದ ವಾಹನಾಪಘಾತಕ್ಕೆ ಧಾರ್ಮಿಕ ಬಣ್ಣದ ಲೇಪನ ಖಂಡನೀಯ – ಕೆಪಿಸಿಸಿ ಮುಖಂಡ ಟಿ.ಎಂ.ಶಹೀದ್ ತೆಕ್ಕಿಲ್…
ಕೊಡಗು: ಮೊನ್ನೆ ಬೋಯಿಕೇರಿ ಸಮೀಪ ನಡೆದಂತಹ ವಾಹನಾಪಘಾತದಲ್ಲಿ ಎರಡು ವಾಹನಗಳಲ್ಲಿ ಇದ್ದಂತಹ ವ್ಯಕ್ತಿಗಳ ಮಧ್ಯೆ ಪ್ರಾರಂಭವಾದ ಘರ್ಷಣೆ ಕೆಲವು ಕಿಡಿಗೇಡಿಗಳು ಕೋಮು ಬಣ್ಣಕ್ಕೆ ತಿರುಗಿಸುತ್ತಿರುವುದು ಖಂಡನೀಯ. ಕೆಲವು ದುಷ್ಠ ಶಕ್ತಿಗಳು ಇದನ್ನು ದುರುಪಯೋಗ ಪಡಿಸುತ್ತಿದ್ದಾರೆ. ಜಾತ್ಯಾತೀತ ತತ್ವದೊಂದಿಗೆ ನಾವೆಲ್ಲ ಸಹೋದರರಂತೆ ಬಾಳಬೇಕು. ತಪ್ಪುಮಾಡಿದ ಜನರಿಗೆ ಪೋಲೀಸ್ ಇಲಾಖೆ ಕಠಿಣ ಶಿಕ್ಷೆ ಕೊಡಿಸಬೇಕು. ಪೋಲೀಸರು ನ್ಯಾಯ ಸಮ್ಮತವಾಗಿ ಕೆಲಸ ಮಾಡಬೇಕು. ಯಾರ ಒತ್ತಡಕ್ಕೂ ಮಣಿಯಬಾರದು ಎಂದು ಕೆಪಿಸಿಸಿ ಮುಖಂಡ ಮತ್ತು ವಿರಾಜಪೇಟೆ ಉಸ್ತುವಾರಿ ಟಿ.ಎಂ.ಶಹೀದ್ ತೆಕ್ಕಿಲ್ ಆಗ್ರಹಿಸಿದ್ದಾರೆ.
ಎಲ್ಲರೂ ಶಾಂತಿ ಕಾಪಾಡಬೇಕು, ಇದೆಲ್ಲ ಕ್ಷುಲ್ಲಕ ವಿಚಾರ, ಇಂತಹ ವಿಚಾರವನ್ನು ರಾಜಕೀಯ ಲಾಭಕ್ಕೆ ದೊಡ್ಡದು ಮಾಡುತ್ತಿರುವುದು ಸರಿಯಲ್ಲ. ಹಿಂದು ಮತ್ತು ಮುಸ್ಲಿಂ ಸಮುದಾಯದಲ್ಲಿ ಇದನ್ನು ದುರುಪಯೋಗ ಪಡಿಸುವವರ ಸಂಖ್ಯೆ ಸ್ವಲ್ಪ ಹೆಚ್ಚು ಕಾಣುತ್ತಿದ್ದು, ಎರಡು ಸಮುದಾಯವು ಪರಸ್ಪರ ಸಹೋದರತೆಯಿಂದ ಜೀವಿಸಬೇಕು. ಅಪಘಾತವು ಆಕಸ್ಮಿಕ, ಇದಕ್ಕೆ ಧಾರ್ಮಿಕ ಮತ್ತು ರಾಜಕೀಯ ಬಣ್ಣ ಬಳಸಬಾರದು ಎಂದು ಟಿ.ಎಂ.ಶಹೀದ್ ತೆಕ್ಕಿಲ್ ವಿನಂತಿಸಿದ್ದಾರೆ.