ಮುತ್ತೂರು ನಟ್ಟಿಲ ಪಂಜುರ್ಲಿ ಮತ್ತು ಪರಿವಾರ ದೈವಗಳ ನೂತನ ದೈವಸ್ಥಾನ ನಿರ್ಮಾಣಕ್ಕೆ ಶಿಲಾನ್ಯಾಸ…
ಬಂಟ್ವಾಳ: ಸುಮಾರು 400 ವರ್ಷಗಳ ಇತಿಹಾಸವಿರುವ ಮುತ್ತೂರು ನಟ್ಟಿಲ ಪಂಜುರ್ಲಿ ಮತ್ತು ಪರಿವಾರ ದೈವಗಳ ನೂತನ ದೈವಸ್ಥಾನ ನಿರ್ಮಾಣಕ್ಕೆ ಶ್ರೀ ವಿನಾಯಕ ಕಾರಂತ ಕಾವೂರು ಇವರ ಪೌರೋಹಿತ್ಯದಲ್ಲಿ ಶಿಲಾನ್ಯಾಸ ಕಾರ್ಯಕ್ರಮವು ನೆರವೇರಿತು. ಸುಮಾರು 75 ಲಕ್ಷ ಅಂದಾಜು ವೆಚ್ಚದಲ್ಲಿ ನಟ್ಟಿಲ ಪಂಜುರ್ಲಿ ದೈವಸ್ಥಾನ, ರಕ್ತೇಶ್ವರಿ ದೈವಸ್ಥಾನ, ಕಲ್ಲುರ್ಟಿ ತೂಕತ್ತೇರಿ , ಗುಳಿಗನ ಕಟ್ಟೆ, ನಾಗಬನ ದ ಜೀರ್ಣೋದ್ಧಾರ, ಬಾವಿ ಹಾಗೂ ಆವರಣಗೋಡೆ ನಿರ್ಮಾಣ ಕಾರ್ಯವು ನಡೆಯಲಿದೆ.
ಮುತ್ತೂರು ನಟ್ಟಿಲ ಪಂಜುರ್ಲಿ ದೈವಸ್ಥಾನಕ್ಕೆ ಸುಮಾರು 400 ವರ್ಷಗಳಿಗೂ ಮಿಕ್ಕಿ ಇತಿಹಾಸವಿದ್ದು ದೇವಾನು ಪಂಬದೆದಿಯ ಭಕ್ತಿಗೆ ಮೆಚ್ಚಿ ಮುತ್ತೂರ ಕಟ್ಟೆಗೆ ಬಂದು ಉಳಿಪಾಡಿಗುತ್ತಿನ ಆಗಿನ ಮುತ್ತೂರು ಮನೆಯಲ್ಲಿದ್ದ ಉಗ್ಗ ಕೊಟ್ರಿಯಾಲ್ ರವರಿಂದ ಆರಾಧನೆಗೊಂಡ ನಟ್ಟಿಲ ಪಂಜುರ್ಲಿ ದೈವಸ್ಥಾನವು ಅಜೀರ್ಣಾವಸ್ಥೆಯಲ್ಲಿದ್ದು, ಸುಬ್ಬಯ್ಯ ಮಾರ್ಲ, ಕೃಷ್ಣರಾಜ ಮಾರ್ಲ ಮತ್ತು ಭಕ್ತರ ಸಮಕ್ಷಮದಲ್ಲಿ ನಡೆದ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ , ನೂತನ ದೈವಸ್ಥಾನ ಜೀರ್ಣೋದ್ಧಾರದ ಪ್ರಯುಕ್ತ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸನ್ಮಾನ್ಯ ಶಾಸಕರಾದಂತಹ ಶ್ರೀ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು , ಸುಬ್ಬಯ್ಯ ಮಾರ್ಲ, ಪ್ರಸನ್ನಶೆಟ್ಟಿ ಉಳಿಪಾಡಿಗುತ್ತು ಇವರ ಗೌರವಾಧ್ಯಕ್ಷತೆಯಲ್ಲಿ ಹಾಗೂ ಶ್ರೀ ಕೃಷ್ಣರಾಜ ಮಾರ್ಲ ಇವರ ಅಧ್ಯಕ್ಷತೆಯಲ್ಲಿ ನಟ್ಟಿಲ ಪಂಜುರ್ಲಿ ದೈವಸ್ಥಾನಕ್ಕೆ ಜೀರ್ಣೋದ್ಧಾರ ಸಮಿತಿಯನ್ನು ರಚಿಸಿ ಊರ ಪರವೂರ ಭಕ್ತಾದಿಗಳ ಉಪಸ್ಥಿತಿಯಲ್ಲಿ ನಿರ್ಧರಿಸಿದಂತೆ ಶಿಲಾನ್ಯಾಸ ಕಾರ್ಯಕ್ರಮವು ದಿನಾಂಕ 07.12.2025 ನೇ ಆದಿತ್ಯವಾರ ಬೆಳಗ್ಗೆ 08:06 ರ ಶುಭ ಮುಹೂರ್ತದಲ್ಲಿ ಸಂಪನ್ನಗೊಂಡಿತು.
ಬಂಟ್ವಾಳ ವಿಧಾನಸಭಾ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಶ್ರೀ ಸುಬ್ಬಯ್ಯ ಮಾರ್ಲ, ಶ್ರೀ ಕೃಷ್ಣರಾಜ ಮಾರ್ಲ ಮತ್ತು ಶ್ರೀ ರಿತೇಶ್ ಮಾರ್ಲ ಇವರು ನೂತನ ದೈವಸ್ಥಾನದ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಉಳಿಪಾಡಿಗುತ್ತು ಮುತ್ತೂರು ಮನೆಯ ಶ್ರೀಮತಿ ಶೈಲಾ ಮಲ್ಲಿ, ಶ್ರೀಮತಿ ಸಂಧ್ಯಾ ನಾಯ್ಕ್, ಹಾಗೂ ಕೊಳವೂರುಗುತ್ತು ಸದಾನಂದ ಶೆಟ್ಟಿ , ಮೊಗರುಗುತ್ತು ವಿದ್ಯಾ ಚರಣ್ ಭಂಡಾರಿ, ದಕ್ಷಿಣಕನ್ನಡ KMF ನಿರ್ದೇಶಕರಾದ ನಂದರಾಮ ರೈ ಅಂಬೋಡಿಮಾರ್ , ಗುರುಪುರ ಬಡಕೆರೆ ಗುತ್ತು ಸಚಿನ್ ಅಡಪ, ಜಪ್ಪುಗುಡ್ಡೆ ಗುತ್ತು ಸುಧೀರ್ ನಾಯ್ಕ್, ಸುಧೀರ್ ಶೆಟ್ಟಿ ಕೊಳವೂರು ಮೇಗಿನಮನೆ, ಮೊಗರು ಪಾಕಬೆಟ್ಟು ಭಾಸ್ಕರ ಶೆಟ್ಡಿ ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಆಳ್ವ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಶಿವಾನಂದ ಕುಲಾಲ್, ದಕ್ಷಿಣಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯರಾದ ಹರಿಯಪ್ಪ ಮುತ್ತೂರು , ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ನಾಗೇಶ್ ಶೆಟ್ಟಿ , ಕುಪ್ಪೆಪದವು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ, ಪಂಬದ ಸಮಾಜ ಸಂಘದ ಅಧ್ಯಕ್ಷರಾದ ಪುರುಷೋತ್ತಮ ಪಂಬದ ಗೋಳಿಪಲ್ಕೆ , ದೈವನರ್ತಕರಾದ ಮುಖೇಶ ಪಂಬದ, ತುಳು ಅಕಾಡೆಮಿಯ ಮಾಜಿ ಅಧ್ಯಕ್ಷರಾದ ದಯಾನಂದ ಕತ್ತಲ್ ಸಾರ್ , ಬಾಲಕೃಷ್ಣ ಪಂಬದ ಪೆರಾರ, ಗ್ರಾಮ ಪಂಚಾಯತ್ ಸದಸ್ಯರಾದ ತಾರನಾಥ ಕುಲಾಲ್ , ಅಮ್ಟಾಡಿವ ಗ್ರಾಮ ಪಂಚಾಯತ್ ಕಾರ್ಯದರ್ಶಿಯವರಾದ ನಿತ್ಯಾನಂದ್ ಕೆ, ಪ್ರಮುಖರಾದ ದೀಪಕ್ ಪೂಜಾರಿ, ಕುಸುಮಾಕರ ಶೆಟ್ಟಿ, ಗಣೇಶ್ ರೈ ಮಾಣಿ, ಉಮೇಶ್ ಪೂಜಾರಿ, ದೀಪ್ತೇಶ್ ಪೂಜಾರಿ, ರವಿಕುಲಾಲ್, ಶೇಖರ್ ಕುಲಾಲ್ ಮಟ್ಟು, ಯಶೋಧರ ಕುಲಾಲ್ ಸೂರಜ್ ಬಂಗೇರ ಮತ್ತು ಊರ ಪ್ರಮುಖರು ಉಪಸ್ಥಿತರಿದ್ದರು.





