ಕಶೆಕೋಡಿ ಜಾತ್ರೋತ್ಸವ, ಬ್ರಹ್ಮರಥೋತ್ಸವ ಆಮಂತ್ರಣ ಪತ್ರ ಬಿಡುಗಡೆ…
ಬಂಟ್ವಾಳ.ದ. 8 -ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ಕಶೆಕೋಡಿ, ಬಾಳ್ತಿಲ, ಇದರ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮರಥೋತ್ಸವ 2026ರ ಫೆಬ್ರವರಿ 3 ರಿಂದ 7 ರ ತನಕ ನಡೆಯಲಿದೆ. ಇದರ ಆಮಂತ್ರಣ ಪತ್ರವನ್ನು ಶ್ರೀ ಕ್ಷೇತ್ರ ಕಶೆಕೋಡಿಯಲ್ಲಿ ಡಿಸೆಂಬರ್ 7ರಂದು ಅನಾವರಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಕಲ್ಲೇಗ ಸಂಜೀವ ನಾಯಕ್, ಹಿರಿಯರಾದ ಶ್ರೀನಿವಾಸ್ ಶೆಣೈ ಕೂಡಿಬೈಲು, ಭವಾನಿ ಶಂಕರ್ ಭಟ್, ವಸಂತ ಭಟ್, ಆಡಳಿತ ಮೊಕ್ತೇಸರರಾದ ಸುಧಾಕರ್ ಶೆಣೈ ಮರೋಳಿ, ಆನುವಂಶಿಕ ಮೊಕ್ತೇಸರರಾದ ವೆಂಕಟ್ರಾಯ ಶೆಣೈ ಕಂಟಿಕ, ಉತ್ಸವ ಸಮಿತಿ ಅಧ್ಯಕ್ಷ ಶ್ರೀ ಸುರೇಶ್ ಪ್ರಭು ಶೆಟ್ಟಿಮಜಲು,ಆಡಳಿತ ಮಂಡಳಿ ಸದಸ್ಯರು, ಉತ್ಸವ ಸಮಿತಿ ಸದಸ್ಯರು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.





