‘ಮೌನ ದೊಳಗಿನ ಮಾತು ‘ ಕವನ ಸಂಕಲನದ ಬಿಡುಗಡೆ…

ಮಂಗಳೂರು: ಅಮೃತ ಪ್ರಕಾಶನ ಪತ್ರಿಕೆವತಿಯಿಂದ ಸರಣಿ ಕೃತಿ ಬಿಡುಗಡೆ 39ನೇ ಕೃತಿ ಸಪ್ನ ದಿನಕರ್ ಅವರ ಮೌನದೊಳಗಿನ ಮಾತು ‘ ಕವನ ಸಂಕಲನವನ್ನು ಲೇಖಕಿ, ವಿಮರ್ಶಕಿ ಶ್ರೀಮತಿ ವಿದ್ಯಾ ನಾಯಕ್ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೆಸ್ ಕ್ಲಬ್ ಮಂಗಳೂರು ಅಧ್ಯಕ್ಷರಾದ ಪಿ.ಬಿ ಹರೀಶ್ ರೈ ವಹಿಸಿದರು. ಮುಖ್ಯ ಅತಿಥಿಗಳಾಗಿ ಗಣ್ಯರಾದ ಯುಗ ಪುರುಷ ಪತ್ರಿಕೆ ಸಂಪಾದಕ ಕುಡೆತ್ತೂರು ಭುವನಾಭಿರಾಮ ಉಡುಪ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರು ,ಹರಿಕೃಷ್ಣ ಪುನರೂರು ಹಾಗೂ ಲೇಖಕಿ ಶ್ರೀಮತಿ ವೀಣಾ ಟಿ. ಶೆಟ್ಟಿ ಹಾಗೂ ಕವಿಯತ್ರಿ, ಶಿಕ್ಷಕಿ ,ಕವಿಯಿತ್ರಿ ಸುಧಾ ನಾಗೇಶ್ ಉಪಸ್ಥಿತರಿದ್ದರು. ಕೃತಿಯ ಲೇಖಕಿ ಸಪ್ನ ದಿನಕರ್, ಅಮೃತ ಪ್ರಕಾಶನ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ.ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿದರು.ಕವಯಿತ್ರಿ ,ಶಿಕ್ಷಕಿ ಸುರೇಖಾ ಯಾಳವಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.