ಸುಳ್ಯ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷರಾಗಿ ತಾಜುದ್ದೀನ್ ಅರಂತೋಡು ನೇಮಕ…

ಸುಳ್ಯ:ಸುಳ್ಯ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷರಾಗಿ ಅರಂತೋಡಿನ ಯುವ ಕಾಂಗ್ರೆಸ್ ನಾಯಕ ತಾಜುದ್ದೀನ್ ಎಸ್ ಅರಂತೋಡು ರವರನ್ನು ಸುಳ್ಯ ಬ್ಲಾಕ್ ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ಅಧ್ಯಕ್ಷ ಜಿ.ಕೆ.ಹಮೀದ್ ನೇಮಕಗೊಳಿಸಿದರು.
ತಾಜುದ್ದೀನ್ ಅರಂತೋಡುರವರು ಸುಳ್ಯ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಮಾಜಿ ಜೊತೆ ಕಾರ್ಯದರ್ಶಿಯಾಗಿ, ಅರಂತೋಡು ವಲಯ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಯಾಗಿ,ಅರಂತೋಡು ವಲಯ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿ ಕೂಡ ಈ ಹಿಂದೆ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಸದಸ್ಯ ರಾಗಿದ್ದಾರೆ .ಇವರು ರಾಜಕೀಯದೊಂದಿಗೆ ಸಮಾಜ ಮುಖಿ ಕೆಲಸವನ್ನು ಮಾಡುತ್ತಿದ್ದಾರೆ.

Related Articles

Back to top button