ಅರಂತೋಡು – ಸ್ವಸಹಾಯ ಸಂಘ ಗಳಿಗೆ ಸಾಲ ವಿತರಣೆ ಮತ್ತು ಟೈಲರಿಂಗ್ ಘಟಕದ ಉದ್ಘಾಟನಾ ಕಾರ್ಯಕ್ರಮ…

ಸುಳ್ಯ: ದುರ್ಗಾಮಾತಾ ಸಂಜೀವಿನೀ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಅರಂತೋಡು ಇದರ ಸಹಯೋಗದಲ್ಲಿ ಸ್ವ ಸಹಾಯ ಸಂಘಗಳಿಗೆ ಸಾಲ ವಿತರಣೆ ಮತ್ತು ದುರ್ಗಾ ಮಾತಾ ಟೈಲರಿಂಗ್ ಘಟಕದ ಉದ್ಘಾಟನಾ ಸಮಾರಂಭವು ಅರಂತೋಡಿನ ಸಿರಿಸೌಧ ದಲ್ಲಿ ನಡೆಯಿತು.
ಕಾರ್ಯಕ್ರಮ ವನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ ದೇರಾಜೆ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು . ಸಭಾ ಕಾರ್ಯಕ್ರಮವು ಸಿರಿ ಸೌಧ ಅರಂತೋಡಿನಲ್ಲಿ ನಡೆಯಿತು. ಸ್ವ ಸಹಾಯ ಗುಂಪುಗಳಿಗೆ ಚೆಕ್ ಮೂಲಕ ಸಾಲ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕು.ಶ್ವೇತಾ ,ಮಹೇಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ , ತಾಲೂಕು ಪಂಚಾಯತ್ ನಿಕಟ ಪೂರ್ವ ಉಪಾಧ್ಯಕ್ಷೆ ಪುಷ್ಪ ಮೇದಪ್ಪ,ಅರಂತೋಡು ಮೆಲ್ವಿಚಾರಕಿ ಸುಮತಿ ಮುಂತಾದವರು ಉಪಸ್ಥಿತರಿದ್ದರು . ಟೈಲರ್ ಮಿಶನನ್ನು ಶ್ರೀಮತಿ ಗಂಗಮ್ಮ ಟೀಚರ್ ಕೊಡುಗೆಯಾಗಿ ನೀಡಿದರು.

Related Articles

Back to top button