ಸುಭೋದ್ ಶೆಟ್ಟಿ ಸಹೋದರರು ಯಾವುದೇ ಜಾಗವನ್ನು ಅಕ್ರಮವಾಗಿ ಕಬಳಿಸಿಲ್ಲ- ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ…

ಸುಳ್ಯ: ಸುಭೋದ್ ಶೆಟ್ಟಿ ಮೇನಾಲ ಹಾಗೂ ಅವರ ಸಹೋದರರು ಯಾವುದೇ ಅಕ್ರಮ ಆಸ್ತಿ ಗಳಿಸಿ ಉದ್ಯಮ ಮಾಡುತ್ತಿಲ್ಲ.
ಅವರ ಕುಟುಂಬ ಪಟ್ಟಾ ಜಾಗದಲ್ಲೇ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸುಭೋದ್ ಶೆಟ್ಟಿ ಸಹೋದರರು ಸರಕಾರಿ ಸ್ಥಳ ಕಬಳಿಸಿದ್ದಾರೆ ಎಂದು ಕೇವಲ ಕಾಂಗ್ರೆಸ್ ಹಾಗೂ ಇತರ ಕೆಲ ಸಂಘಟನೆಗಳು ಹಬ್ಬಿಸುತ್ತಿದ್ದಾರೆ. ಆ ಜಾಗವನ್ನು ಸ್ಥಳಿಯ ದರ್ಗಾಕ್ಕೆ ಸೇರಿಸಿಕೊಳ್ಳಬೇಕು ಎಂಬ ದುರುದ್ದೇಶವನ್ನು ಸುಬೋದ್ ಶೆಟ್ಟಿ ಅವರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಅವರ ಮೇಲೆ ಆರೋಪ ಹೊರಿಸಲಾಗುತ್ತಿದೆ ಎಂದರು.
ಈ ಸಂದರ್ಭ ನ.ಪಂ. ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಐ.ಬಿ ಚಂದ್ರಶೇಖರ್, ಚನಿಯ ಕಲ್ತಡ್ಕ, ಸುನೀಲ್ ಕೇರ್ಪಳ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.