ಮಲಪುರಂ ಡಿ ಸಿ ಸಿ ಅಧ್ಯಕ್ಷ ವಿ.ವಿ ಪ್ರಕಾಶ್ ರವರ ಅಕಾಲಿಕ ನಿಧನಕ್ಕೆ ಟಿ.ಎಂ.ಶಾಹೀದ್ ತೆಕ್ಕಿಲ್ ಸಂತಾಪ…

ಸುಳ್ಯ: ಕೇರಳ ರಾಜ್ಯದ ಮಲಪುರಂ ಜಿಲ್ಲೆಯ ಡಿ ಸಿ ಸಿ ಯ ಅಧ್ಯಕ್ಷರು ಹಾಗೂ ಇತ್ತೀಚಿಗೆ ನಡೆದ ಕೇರಳ ವಿಧಾನ ಸಭಾ ಚುನಾವಣೆಯಲ್ಲಿ ನಿಲಂಬೂರು ವಿಧಾನ ಸಭಾ ಕ್ಷೇತ್ರದ ಯು.ಡಿ.ಎಫ್ ಅಭ್ಯರ್ಥಿಯಾಗಿದ್ದ ವಿ.ವಿ ಪ್ರಕಾಶ್ ರವರ ಅಕಾಲಿಕ ನಿಧನಕ್ಕೆ ಕೆ.ಪಿ.ಸಿ.ಸಿ ಯ ಮಾಜಿ ಕಾರ್ಯದರ್ಶಿ ಟಿ.ಎಂ.ಶಾಹೀದ್ ತೆಕ್ಕಿಲ್ ಸಂತಾಪ ವ್ಯಕ್ತ ಪಡಿಸಿದ್ದಾರೆ.
ವಿ.ವಿ ಪ್ರಕಾಶ್ ರೊಂದಿಗೆ ನಾನು ಕಳೆದ 31 ವರ್ಷಗಳಿಂದ ಒಡನಾಡಿಯಾಗಿ ಪಕ್ಷದಲ್ಲಿ ಒಟ್ಟಿಗೆ ವಿವಿಧ ಸಂದರ್ಭದಲ್ಲಿ ಕೆಲಸ ಮಾಡಿರುತ್ತೇನೆ. ಉತ್ತಮ ಸಂಘಟಕರು ಆಗಿದ್ದ ಅವರು ನಾನು N S U I ನ ತಾಲೂಕು ಜನರಲ್ ಕಾರ್ಯದರ್ಶಿಯಾಗಿದ್ದಾಗ ಮಲಪುರಂ ತಾಲೂಕು N S U I ಘಟಕದ ಅಧ್ಯಕ್ಷರಾಗಿದ್ದರು. ನಾನು ಕರ್ನಾಟಕ ರಾಜ್ಯದ N S U I ನ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಗಿದ್ದಾಗ ಅವರು ಕೇರಳ ರಾಜ್ಯದ N S U I ನ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅವರು ಕೇರಳ ರಾಜ್ಯದ ಕೆ.ಪಿ.ಸಿ.ಸಿ. ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದಾಗ ನಾನು ಕರ್ನಾಟಕ ಪ್ರದೇಶ ಕಾಂಗ್ರೇಸ್ ನ ಕಾರ್ಯದರ್ಶಿ ಯಾಗಿದ್ದೆ . ಕಾಂಗ್ರೇಸ್ ಪಕ್ಷದ ನಿಷ್ಠಾವಂತ ಮತ್ತು ಪ್ರಾಮಾಣಿಕರಾಗಿರುವ ಪ್ರಕಾಶ್ ರವರು ಇತ್ತೀಚಿಗೆ ನಡೆದ ಕೇರಳ ವಿಧಾನ ಸಭಾ ಚುನಾವಣೆಯಲ್ಲಿ ನಿಲಂಬೂರು ವಿಧಾನಸಭಾ ಕ್ಷೇತ್ರದ ಯು ಡಿ ಎಫ್ ಅಭ್ಯರ್ಥಿಯಾಗಿದ್ದರು. ಭಗವಂತನು ಮೃತರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬ ವರ್ಗದವರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಟಿ.ಎಂ.ಶಾಹೀದ್ ತೆಕ್ಕಿಲ್ ತಮ್ಮ ಸಂತಾಪದಲ್ಲಿ ತಿಳಿಸಿರುತ್ತಾರೆ.