ಟಿ. ಎಂ ಶಹೀದ್ ಸಾರ್ವಜನಿಕ ಸನ್ಮಾನ…
ಶಿವಮೊಗ್ಗ ಆದಿಚುಂಚನಗಿರಿ ಮಠ ದ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ರಿಂದ ಮತ್ತು ಕೆವಿಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ವತಿಯಿಂದ ಸನ್ಮಾನ...

ಸುಳ್ಯ: ಶೈಕ್ಷಣಿಕ, ಧಾರ್ಮಿಕ ಮತ್ತು ಸರ್ವ ಧರ್ಮ ಸೌಹಾರ್ದತೆಗೆ ತನ್ನದೇ ಆದ ಕೊಡುಗೆ ನೀಡಿದ ಟಿ. ಎಂ. ಶಹೀದ್ ತೆಕ್ಕಿಲ್ ರವರಿಗೆ ಜು. 6 ರಂದು ಸುಳ್ಯದಲ್ಲಿ ನಡೆದ ಸಾರ್ವಜನಿಕ ಸನ್ಮಾನ ಕಾರ್ಯಕ್ರಮ ದಲ್ಲಿ ಶಿವಮೊಗ್ಗ ಆದಿಚುಂಚನಗಿರಿ ಮಠದ ಶಿಕ್ಷಣ ಸಂಸ್ಥೆಗಳ ಕಾರ್ಯ ನಿರ್ವಾಹಕ ನಿರ್ದೇಶಕ ಡಿ. ವಿ. ಸತೀಶ್ ರವರು ಗೌರವಾರ್ಪಣೆ ಮಾಡಿದರು.
ಕೆವಿಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಪ್ರಾoಶುಪಾಲರಾದ ಡಾ. ಡಿ. ವಿ. ಲೀಲಾಧರ್ ರವರು ಕೆವಿಜಿ ಆಯುರ್ವೇದಿಕ್ ಕಾಲೇಜು ಪರವಾಗಿ ಸನ್ಮಾನಿಸಿದರು.