ಶಹೀದ್ ಸನ್ಮಾನ ಸಮಾರಂಭ-ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ ದ ವತಿಯಿಂದ ಗೌರವಾರ್ಪಣೆ…

ಸುಳ್ಯ: ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಮತ್ತು ಉದ್ಯಮ ಕ್ಷೇತ್ರದಲ್ಲಿ ಕಳೆದ ಹಲವು ದಶಕಗಳಿಂದ ತೊಡಗಿಸಿಕೊಂಡು ಬಂದಿರುವ ಟಿ. ಎಂ. ಶಹೀದ್ ತೆಕ್ಕಿಲ್ ರವರಿಗೆ ಸುಳ್ಯದಲ್ಲಿ ಜು. 6 ರಂದು ಏರ್ಪಡಿಸಲಾದ ಸನ್ಮಾನ ಸಮಾರಂಭದಲ್ಲಿ ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ಪಿ. ಬಿ. ಸುಧಾಕರ್ ರೈ, ಕಾರ್ಯದರ್ಶಿ ಡಿ. ಎಸ್. ಗಿರೀಶ್, ಪದಾಧಿಕಾರಿಗಳಾದ ಆದo ಹಾಜಿ ಕಮ್ಮಾಡಿ, ಅಬ್ದುಲ್ ಹಮೀದ್ ಜನತಾ, ಶ್ರೀಮತಿ ಲತಾ ಕುದ್ಪಾಜೆ, ಟಿ. ಎಂ. ಖಾಲಿದ್ ಮೊದಲಾದವರು ಉಪಸ್ಥಿತರಿದ್ದರು.