ತೆಕ್ಕಿಲ್ ಸೋಕರ್ ಲೀಗ್ 5 ನೇ ಆವೃತ್ತಿಯ ಫುಟ್ಬಾಲ್ ಪಂದ್ಯಕೂಟ…

ಸುಳ್ಯ:ಅರಂತೋಡು ಶಾಲಾ ಮೈದಾನದಲ್ಲಿ ಅ.2 ರಂದು ರಂದು ನಡೆದ ತೆಕ್ಕಿಲ್ ಸೋಕರ್ ಲೀಗ್ 5 ನೇ ಆವೃತ್ತಿಯ ಫುಟ್ಬಾಲ್ ಪಂದ್ಯಕೂಟದ ಉದ್ಘಾಟನೆಯನ್ನು ಅನಿವಾಸಿ ಉದ್ಯಮಿ ಹಬೀಬ್ ಗುಂಡಿ ಅರಂತೋಡು ನೇರವೇರಿಸಿದರು.
ಪಂದ್ಯಕೂಟದಲ್ಲಿ ಬಲಿಷ್ಠ 6 ತಂಡಗಳ ನಡುವೆ ತೆಕ್ಕಿಲ್ ಸೋಕರ್ ಲೀಗ್ -ಸೀಸನ್ 5 ಕಿರೀಟಕ್ಕೆ ತೀವ್ರ ಜಿದ್ದಾ ಜಿದ್ದಿನ್ ಪೈಪೋಟಿ ನಡೆಯಿತು. ಕೊನೆಯಲ್ಲಿ ಸಿ ಕೆ ಲೆಜೆಂಡ್ಸ್ ತಂಡವು ಚಾಂಪಿಯನ್ ಹಾಗೂ ಕಾರ್ಗಿಲ್ ಎಫ್ ಸಿ ರನ್ನರ್ಸ್ ಸ್ಥಾನವನ್ನು ಪಡೆಯಿತು. ಪಂದ್ಯಕೂಟದ ಸಮಾರೂಪ ಸಮಾರಂಭದಲ್ಲಿ ತೆಕ್ಕಿಲ್ ಸೋಕರ್ಸ್ ನ ಟಿ ಎಂ ಶಹೀದ್ ತೆಕ್ಕಿಲ್ ಅಧ್ಯಕ್ಷತೆ ವಹಿಸಿದರು.
ಟಿ ಎಂ ಶಾಹಿದ್ ತೆಕ್ಕಿಲ್, ಫ್ರೆಂಡ್ಸ್ ಗೂನಡ್ಕ ದ ಸಾಜಿದ್ ಐ ಜಿ ಗೂನಡ್ಕ ಬಹುಮಾನ ವಿತರಿಸಿದರು ,ಅನ್ವರ್ ಅರಂತೋಡು, ಕಾದರ್ ಮೊಟ್ಟೆಂಗಾರ್ , ತಾಜು ದ್ದೀನ್ ಮೊದಲಾದವರು ಉಪಸ್ಥಿತರಿದ್ದರು.
ಸುಂದರವಾದ ಪಂದ್ಯಕೂಟವನ್ನು ಫ್ರೆಂಡ್ಸ್ ಗೂನಡ್ಕದ ಇಕ್ಬಾಲ್ ಮೊಟ್ಟೆಮ್ಗಾರ್ ಮತ್ತು ಅಝೀಝ್ ಗೂನಡ್ಕ ಸಂಘಟಸಿದರು. ಸುನೈಲ್ ಹಾಗು ನಿಜಾ ರ್ ಪಂದ್ಯಾಟದ ನಿರ್ಣಾಯಕರಾಗಿದ್ದರು. ಟಿ ಎಂ ಇಜಾಸ್ ಗೂನಡ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಅಬ್ದುಲ್ ಖಾದರ್ ಮೊಟ್ಟೆಗಾರ್ ವಂದಿಸಿದರು.

whatsapp image 2024 10 03 at 5.20.13 pm

Sponsors

Related Articles

Back to top button