ಆಲೆಟ್ಟಿ ಪ್ರೌಢಶಾಲೆಗೆ ಟಿ.ವಿ. ಕೊಡುಗೆ…
ಸುಳ್ಯ: ಆಲೆಟ್ಟಿ ಪ್ರೌಢಶಾಲೆಗೆ ಸ್ಮಾರ್ಟ್ ಕ್ಲಾಸ್ ನಡೆಸಲು ಅಗತ್ಯವಿರುವ ಎಲ್.ಇ.ಡಿ. ಟಿ.ವಿ. ಯನ್ನು ಸ್ಪೀಡ್ ಕಂಪ್ಯೂಟರ್ಸ್ ಮಾಲಕ ಶ್ರೀನಾಥ್ ಆಲೆಟ್ಟಿ ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಯುವಕ ಮಂಡಲ ಅಧ್ಯಕ್ಷ ದಿನೇಶ್ ಆಲೆಟ್ಟಿ, ಪ್ರಗತಿ ಪರ ಕೃಷಿಕ ಚಂದ್ರ ಯಾದವ್ ಆಲೆಟ್ಟಿ, ವಿಜಯ್ ಕುಮಾರ್ ಆಲೆಟ್ಟಿ, ಕೃತಿಕಾ ಮದುವೆಗದ್ದೆ, ಗೋಪಾಲ ಗುಂಡ್ಯ ಮತ್ತು ಶಾಲಾ ಮುಖ್ಯ ಶಿಕ್ಷಕಿ ಹಾಗೂ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.