ಶಾಹೀನ್ ಚಂಡಮಾರುತ – ಸೇವೆಗೆ ಕೈಜೋಡಿಸಿದ ಕೆಸಿಎಫ್ ಒಮಾನ್…

ಒಮಾನ್: ಸುಲ್ತಾನತ್ ಓಫ್ ಒಮಾನಿಗೆ ಶಾಹೀನ್ ಚಂಡಮಾರುತವು ಅಪ್ಪಳಿಸಿದ್ದು, 11 ಜನರನ್ನು ಬಲಿತೆಗೆದುದಲ್ಲದೆ ಮುಸನ್ನಾದಿಂದ ಹಫೀತ್ ವರೆಗೆ ತುಂಬಾ ನಾಶ-ನಷ್ಠಗಳು ಸಂಭವಿಸಿತು.
ಬಿದಾಯ ಎಂಬ ಪ್ರದೇಶದಲ್ಲಿ ಹೆಚ್ಚಿನ ಅಂಗಡಿಗಳು, ಮನೆಗಳು, ರಸ್ತೆಗಳು ಎಲ್ಲವೂ ಚೆಲ್ಲಾಪಿಲ್ಲಿಯಾಗಿದ್ದು, ಈ ಪ್ರದೇಶಗಳನ್ನು ಮರುಸ್ಥಾಪನೆ ಮಾಡಲು ಸಹಾಯಹಸ್ತವು ಸಾಲುಸಾಲಾಗಿ ಬರುತ್ತಿದ್ದು, ಇದರ ಜೊತೆಗೆ ತಾಯ್ನಾಡನಿಂದ ಕೆಲಸಕ್ಕೆಂದು ಬಂದು ಅನ್ನ ನೀಡಿದ ನಾಡಿಗೆ ಸಂಕಷ್ಟ ಬಂದಾಗ ಸಹಾಯ ನೀಡಲು ಕರ್ನಾಟಕದ ಅನಿವಾಸಿಗಳ ಪ್ರೀತಿಯ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ಸಾಂತ್ವನ ವಿಭಾಗದ ನೇತೃತ್ವದಲ್ಲಿ ಕೆಸಿಎಫ್ ಒಮಾನ್ ಹೆಲ್ಪ್ ಡೆಸ್ಕ್ ಮೂಲಕ ತನ್ನಲ್ಲಾಗುವ ಸಹಾಯಕ್ಕೆ ತನ್ನ ಮಾತೃ ಸಂಘಟನೆಯಾದ ಐಸಿಎಫ್ ನೊಂದಿಗೆ ಕೈ ಜೋಡಿಸಿದೆ. ಈ ಸೇವೆಯಲ್ಲಿ ಐಸಿಎಫ್ ನಾಯಕರು, ಕೆಸಿಎಫ್ ಒಮಾನ್ ನಾಯಕರು, ವಿವಿಧ ಝೋನ್ ಗಳ ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸಿದರು. ಕೆಸಿಎಫ್ ಒಮಾನ್ ಸಮಿತಿಯು ಆವಶ್ಯಕ ವಸ್ತುಗಳನ್ನು ನೀಡುವುದರ ಮೂಲಕ ಹಾಗೂ ಶ್ರಮದಾನ ದ ಮೂಲಕ ತಮ್ಮ ಸಹಾಯ ಹಸ್ತವನ್ನು ನೀಡಿತು.