ಗುರುವಂದನೆ- ಬಾಗಿನ ಕೊಟ್ಟು ಗೌರವ ಸಮರ್ಪಣೆ…
ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಹಿಳಾ ಮೋರ್ಚಾ ಗೊಳ್ತಮಜಲು ಮಹಾ ಶಕ್ತಿ ಕೇಂದ್ರದ ವತಿಯಂದ ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಜು. 21 ರಂದು ನಡೆದ ಗುರುಪೂಜೆ ಕಾರ್ಯಕ್ರಮದಲ್ಲಿ ಮಾತೆಯರಿಗೆ ಗುರುಗಳಂತಿರುವ ಡಾ. ಕಮಲ ಪ್ರಭಾಕರ ಭಟ್ ಅವರನ್ನು ಬಾಗಿನ ಕೊಟ್ಟು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಲಖಿತ ಆರ್. ಶೆಟ್ಟಿ, ಮಂಡಲದ ಮಹಿಳಾ ಮೋರ್ಚಾದ ನೂತನ ಪದಾಧಿಕಾರಿ ಜಯಶ್ರೀ, ಮಹಾ ಶಕ್ತಿ ಕೇಂದ್ರದ ಮಹಿಳಾ ಪ್ರಮುಖ್ ಲೀಲಾವತಿ, ಬಾಳ್ತಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ರೇಣುಕಾ, ಬೂತ್ ಪ್ರಮುಖರಾದ ವಿದ್ಯಾಶ್ರೀ , ಉಷಾ ಕೃಷ್ಣಕೋಡಿ, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.




