ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜಿಪಮೂಡ – ತಡೆಗೋಡೆ ಕಾಮಗಾರಿಯ ಶಿಲಾನ್ಯಾಸ…

ಬಂಟ್ವಾಳ: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗಡೆಯವರ ಅನುದಾನದೊಂದಿಗೆ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜಿಪಮೂಡ ದೇವಾಲಯದ ಮುಂಭಾಗದ ತಡೆಗೋಡೆ ಕಾಮಗಾರಿಯ ಶಿಲಾನ್ಯಾಸವನ್ನು ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ದೇವಿಪ್ರಸಾದ ಪೂಂಜಾ ನೆರವೇರಿಸಿದರು.
ಧಾರ್ಮಿಕ ವಿಧಿ-ವಿಧಾನಗಳನ್ನು ಸಜಿಪ ಮಾಗಣೆ ತಂತ್ರಿ ಎಂ ಸುಬ್ರಮಣ್ಯ ಭಟ್ ವಿದ್ಯುಕ್ತವಾಗಿ ನೆರವೇರಿಸಿದರು. ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಜಯಶಂಕರ ಬಾಸ್ರಿತ್ತಾಯ, ಕೆ ಸದಾನಂದ ಶೆಟ್ಟಿ, ಬಾಲಕೃಷ್ಣ, ರವಿ ಪಂಬದ, ಎಂ ಶಂಕರನಾರಾಯಣ ಭಟ್, ಪಿ ಜಯಪ್ರಕಾಶ್, ವಿಶ್ವನಾಥ ಕೊಟ್ಟಾರಿ, ಗಣೇಶ್ ಕಾರಂತ, ದೀರ ಜ ನಾಯಕ ಮೊದಲಾದವರು ಉಪಸ್ಥಿತರಿದ್ದರು.





