ಸರಕಾರಿ ಪದವಿ ಪೂರ್ವ ಕಾಲೇಜು ಸಜೀಪ ಮೂಡ- 77ನೇ ಗಣರಾಜ್ಯೋತ್ಸವ ಆಚರಣೆ…
ಬಂಟ್ವಾಳ: ಸರಕಾರಿ ಪದವಿ ಪೂರ್ವ ಕಾಲೇಜು ಸಜೀಪ ಮೂಡ ಇಲ್ಲಿ 77ನೇ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ಕಾಲೇಜು ಪ್ರಾಚಾರ್ಯ ಡಾ. ಜೈರಾಬಿ ನೆರವೇರಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎಂ ಸುಬ್ರಹ್ಮಣ್ಯ ಭಟ್ ಗಣರಾಜ್ಯೋತ್ಸವದ ಮಹತ್ವವನ್ನು ವಿವರಿಸಿದರು. ಸಮಿತಿ ಸದಸ್ಯ ವಿಶ್ವನಾಥ ಕೊಟ್ಟಾರಿ, ಉಪನ್ಯಾಸಕರಾದ ಸುರೇಶ್ ಬಿ, ಬಾಲಕೃಷ್ಣ ಎನ್ .ವಿ., ಭಾರತಿ, ಗಾಯತ್ರಿ, ಶೋಭ, ಸುಂದರಿ, ಬಾಲಕೃಷ್ಣ ನಾಯಕ್ ಉಪಸ್ಥಿತರಿದ್ದರು, ವಿದ್ಯಾರ್ಥಿಗಳು ರಾಷ್ಟ್ರಗೀತೆ, ಧ್ವಜಗೀತೆ ಹಾಡಿದರು.



