ಮಾಣಿಯಲ್ಲಿ ಬೃಹತ್ ಹಿಂದೂ ಸಂಗಮ…

ಹಿಂದೂ ಜೀವನ ಮೌಲ್ಯಗಳ ಪುನರುಜ್ಜೀವನವಾಗಬೇಕಾಗಿದೆ-.ಪಾರ್ಥ ಸಾರಥಿ...

ಬಂಟ್ವಾಳ, ಜ.26:ಹಿಂದೂ ಆಚಾರ ,ವಿಚಾರ ,ನಂಬಿಕೆ ಗಳನ್ನು ವಿಶ್ವಶಾಂತಿಗಾಗಿ ಉಳಿಸಿ ಬೆಳೆಸಬೇಕಾಗಿದೆ. ಕುಟುಂಬದಲ್ಲಿ ಸಾಮರಸ್ಯದ ಜೀವನ ನಡೆಸಬೇಕು.ರಾಷ್ಟ್ರಕ್ಕಾಗಿ ತ್ಯಾಗ , ಸಮರ್ಪಣೆ ಮಾಡುವ ಕಾರ್ಯಕ್ಕೆ ಶಿವಾಜಿ,ವಿವೇಕಾನಂದರು ಆದರ್ಶವಾಗಬೇಕು. ಪರಿಸರದ ಬಗ್ಗೆ ಕಾಳಜಿ, ಜಲ ಸಂರಕ್ಷಣೆ,ಸ್ವದೇಶಿ ಚಿಂತನೆಗಳನ್ನು ಮಾಡುವ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಬೇಕಾಗಿದೆ. ಹಿಂದೂ ಮೌಲ್ಯಗಳ ಪುನರುಜ್ಜೀವನ ಕಾರ್ಯ ನಿರಂತರ ನಡೆಯಬೇಕು ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪಾರ್ಥ ಸಾರಥಿ ಮುಲ್ಕಿ ದಿಕ್ಸೂಚಿ ಭಾಷಣ ಮಾಡುತ್ತಾ ಹಿಂದುಗಳ ಒಗ್ಗಟ್ಟಿಗೆ ಕರೆ ನೀಡಿದರು.
ಅವರು ಭಾನುವಾರ ಮಾಣಿಯಲ್ಲಿ ನೇರಳಕಟ್ಟೆ ಕೃಷಿ ಪತ್ತಿನ ಸಹಕಾರಿ ಸಂಘದ ವಿಶಾಲ ನಿವೇಶನದಲ್ಲಿ ವಿಟ್ಲ ತಾಲೂಕಿನ ಮಾಣಿ ಮಂಡಲ ಹಿಂದು ಸಂಗಮ ಆಯೋಜನಾ ಸಮಿತಿಯಿಂದ ಆರೆಸ್ಸೆಸ್ ಶತಮಾನೋತ್ಸವದ ಅಂಗವಾಗಿ ಏರ್ಪಡಿಸಲಾದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಸ್ವಾಮೀಜಿ‌‌ ಆಶೀರ್ವಚನ ನೀಡಿ ಮನೆಗಳಲ್ಲಿ,ಮಠಗಳಲ್ಲಿ,ಮಂದಿರಗಳಲ್ಲಿ ಜಾತಿ ಭೇದ ರಹಿತವಾಗಿ ಸಂಸ್ಕಾರ,ಸಂಸ್ಕೃತಿ ಕಲಿಸುವ ವ್ಯವಸ್ಥೆ ಯಾಗಬೇಕು. ದೇವ ಭಕ್ತಿಯೊಂದಿಗೆ ದೇಶ ಶಕ್ತಿ ಜಾಗೃತವಾಗಬೇಕಾಗಿದೆ ಎಂದರು.
ಶುಭಲಕ್ಷ್ಮೀ ಶಿವಗಿರಿ ಮನೆ ಹಾಗೂ ಸಾಮಾಜಿಕವಾಗಿ ಮಹಿಳೆ ವಿಚಾರವಾಗಿ ಮಾತನಾಡಿದರು. ಹಿರಿಯ ಸ್ವಯಂಸೇವಕರಾದ ಕುಳ್ಳಾಜೆ ಸುಬ್ರಹ್ಮಣ್ಯ ಭಟ್, ನಾರಾಯಣ ಬಂಗೇರ ಬರಿಮಾರು,ನಾಟಿವೈದ್ಯರಾದ ಸೋಮನಾಥ ಪಂಡಿತ್, ಅನಂತಾಡಿ, ಗಂಗಾಧರ ಪಂಡಿತ್ ನೆಟ್ಲಮೂಡ್ನೂರು ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಹಿಂದು ಸಂಗಮ ಆಯೋಜನಾ ಸಮಿತಿಯ ಗೌರವಾಧ್ಯಕ್ಷ ಲೋಕಯ್ಯ ಶೇರಾ ,ಉಪಾಧ್ಯಕ್ಷ ಗೋಪಾಲ ನೆಲ್ಲಿ,ಕಾರ್ಯದರ್ಶಿ ಗಣೇಶ ರೈ ಮಾಣಿ,ಸಹಕಾರ್ಯದರ್ಶಿ ಜಯಶಂಕರ ರೈ ಚೆಂಬರಡ್ಕ, ಉಪಸ್ಥಿತರಿದ್ದರು.
ಗಂಗಾಧರ ಮಾಣಿ ಪ್ರೇರಣಾ ಗೀತೆ ಹಾಡಿ,ಕಾರ್ಯಕರ್ತರಾದ ದಿನೇಶ ಅನಂತಾಡಿ ಸ್ವಾಗತಿಸಿದರು.ನ್ಯಾಯವಾದಿ ವಿಜಯಾನಂದ ಸನ್ಮಾನಿತರ ಪರಿಚಯ ಮಾಡಿದರು. ಅಶೋಕ ರೈ ನೇರಳಕಟ್ಟೆ ವಂದಿಸಿದರು.ಅಶ್ವತ್ ಬರಿಮಾರು ವಂದೇ ಮಾತರಂ ಗೀತೆ ಹಾಡಿದರು. ಯತಿರಾಜ ಪೆರಾಜೆ ನಿರೂಪಿಸಿದರು.
ಆರಂಭದಲ್ಲಿ ನೇರಳಕಟ್ಟೆ ಗಣೇಶ ನಗರದಿಂದ ಶೋಭಾಯತ್ರೆ ಪ್ರಾರಂಭಗೊಂಡು ಕೊಡಾಜೆ, ಶ್ರೀ ರಾಮಚಂದ್ರಾಪುರ ಮಠದ ದ್ವಾರ ಸೀತಾರಾಮ ನಗರದ ಮೂಲಕ ಮಾಣಿ ಮೈದಾನಕ್ಕೆ ತಲಪಿತು. ಭಾರತ ಮಾತೆಯ ಸ್ತಬ್ದ ಚಿತ್ರ,ಚೆಂಡೆವಾದನದೊಂದಿಗೆ ಶ್ರೀ ದುರ್ಗಾಪರಮೇಶ್ವರಿ ಭಜನಾ ತಂಡ ನೇರಳಕಟ್ಟೆ,ಶ್ರೀ ದೇವಿ ಭಜನಾ ಮಂಡಳಿ ಪೆರಾಜೆ,ಶ್ರೀ ದುರ್ಗಾಪರಮೇಶ್ವರಿ ಮಕ್ಕಳ ಭಜನಾ ಮಂಡಳಿ ಅನಂತಾಡಿ, ಮಾತೃ ಮಂಡಳಿ ಮಾಣಿ,ಮಾತೃ ಶ್ರೀ ಭಜನಾ ಮಂಡಳಿ ಕನ್ಯಾನ, ಯುವಕ ಮಂಡಲ ಭಜನಾ ತಂಡ ಕಬಕ,ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಮಾಣಿಯ ತಂಡಗಳು ನೃತ್ಯ ಭಜನೆಯೊಂದಿಗೆ ಪಾಲ್ಗೊಂಡರು.ಅನಂತಾಡಿ,ನೆಟ್ಲ ಮೂಡ್ನೂರು,ಪೆರಾಜೆ,ಮಾಣಿ,ಬರಿಮಾರು ಗ್ರಾಮಗಳ ಗ್ರಾಮಸ್ಥರು ಸಹಸ್ರಾರು ಸ್ವಯಂಸೇವಕರು,ಹಿಂದೂ ಬಾಂಧವರು ಪಾಲ್ಗೊಂಡಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ಕೆಸರಿ ಧ್ವಜಗಳಿಂದ,ಸ್ವಾಗತ ಫಲಕಗಳಿಂದ ಅಲಂಕರಿಸ ಲಾಗಿತ್ತು. ಅನಂತ ಪ್ರಭು ನೇರಳ ಕಟ್ಟೆ,ಸನತ್ ಕುಮಾರ್ ರೈ ,ಗಣೇಶ ಪೂಜಾರಿ ಅನಂತಾಡಿ,ರಾಜಾರಾಮ ಕಾಡೂರು,ಮಾಧವ ಪಾಳ್ಯ ,ಶ್ರೀ ನಿವಾಸ ಪೂಜಾರಿ,ರಾಘವ ಏಣಾಜೆ, ಉಮೇಶ ಎಸ್ಪಿ, ಪುಷ್ಪರಾಜ ಚೌಟ ಮಾಣಿ ಬರಿಮಾರು, ತನಿಯಪ್ಪ ಗೌಡ ನೆಟ್ಲ ಮೂಡ್ನೂರು, ಕಮಲಾಕ್ಷಿ ಪೂಜಾರಿ,ಸದಾಶಿವ ಬರಿಮಾರು,ಸುಬ್ರಹ್ಮಣ್ಯ ಭಟ್ ಭರಣಿಕೆರೆ, ಸುಬ್ರಾಯ ನಾಯಕ್, ತೋಟ ನಾರಾಯಣ ಶೆಟ್ಟಿ, ಬಪ್ಪುಕೋಡಿ ನಾರಾಯಣ ಭಟ್, ಪುಷ್ಪರಾಜ ಚೌಟ,ಪ್ರಫುಲ್ಲ ರೈ ಹರೀಶ್ ಕುಲಾಲ್ ಮಾಣಿ ,ಮಾಧವ ಮಾವೆ ಹಾಗೂ ಆರೆಸ್ಸೆಸ್ ನ ಹಿರಿಯ ಸ್ವಯಂಸೇವಕರು,ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

whatsapp image 2026 01 26 at 7.08.23 pm

whatsapp image 2026 01 26 at 7.08.22 pm

Related Articles

Back to top button