ಪೊಲೀಸ್ ಸಿಬ್ಬಂದಿಗೆ ಮೋಬ್ ಆಪರೇಷನ್ ಪ್ರಾತ್ಯಕ್ಷಿಕೆ….
ಪುತ್ತೂರು: ಪುತ್ತೂರು ಉಪ ವಿಭಾಗ ವ್ಯಾಪ್ತಿಯ ಠಾಣೆಗಳ ಪೊಲೀಸ್ ಸಿಬ್ಬಂದಿಗಳಿಗೆ ಶನಿವಾರ ಮೋಬ್ ಆಪರೇಷನ್ ಪ್ರಾತ್ಯಕ್ಷಿಕೆ ಪುತ್ತೂರು ನಗರದ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಿತು.
ಬೆಳಗ್ಗೆ 6 ರಿಂದ ಸುಮಾರು 9 ಗಂಟೆಯ ತನಕ ಮೋಬ್ ಆಪರೇಷನ್, ಬಳಿಕ ಚಿಕ್ಕಮುಡ್ನೂರು ಗ್ರಾಮದ ಕಠಾರದ ಬಳಿ ಗ್ಯಾಸ್ -ಫೈಯರಿಂಗ್ ತರಬೇತಿ ನಡೆಯಿತು. ಕಾನೂನು ಸುವ್ಯವಸ್ಥೆ ಕಾಪಾಡುವುದರೊಂದಿಗೆ ಅಪರಾಧ ನಿಯಂತ್ರಣ, ಪ್ರತಿಭಟನೆ, ದೊಂಬಿ ಗಲಾಟೆಗಳನ್ನು ನಿಯಂತ್ರಿಸುವ ಕುರಿತು ದ.ಕ. ಜಿಲ್ಲಾ ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಮತ್ತು ಪುತ್ತೂರು ಡಿವೈಎಸ್ಪಿ ದಿನಕರ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ರಿಸರ್ವ್ ಪೊಲೀಸ್ ಇನ್‍ಸ್ಪೆಕ್ಟರ್ ನಾರಾಯಣ ಪೂಜಾರಿ ಮತ್ತು ಪುತ್ತೂರು ನಗರ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್ ನೇತೃತ್ವದಲ್ಲಿ ಪ್ರಾತ್ಯಕ್ಷಿಕೆ ನಡೆಯಿತು.
ಪುತ್ತೂರು, ಸುಳ್ಯ, ಉಪ್ಪಿನಂಗಡಿ, ಸಂಪ್ಯ, ಬೆಳ್ಳಾರೆ, ಪುತ್ತೂರು ಮಹಿಳಾ ಠಾಣೆ, ಸಂಚಾರ ಠಾಣೆಯ ಇನ್‍ಸ್ಪೆಕ್ಟರ್ ಗಳು, ಎಸ್.ಐ.ಗಳು, ಎ.ಎಸ್.ಐ.ಗಳು ಮತ್ತು ಸಿಬಂದಿ ಹಾಗೂ ಸಶಸ ಮೀಸಲು ಪಡೆಯ ಸಿಬಂದಿ ಪಾಲ್ಗೊಂಡರು.