ಸಂಪಾಜೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಸ್ವಾತಂತ್ರೋತ್ಸವ ಕಾರ್ಯಕ್ರಮ…

ಸುಳ್ಯ: ಸಂಪಾಜೆ ಗ್ರಾಮ ಪಂಚಾಯತ್ ಕಚೇರಿ ಮುಂಭಾಗ 79ನೇ ಸ್ವಾತಂತ್ರೋತ್ಸವ ಕಾರ್ಯಕ್ರಮ ಅಂಗವಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಹಲವಾರು ಮಹನೀಯರ ತ್ಯಾಗ ಬಲಿದಾನದ ಮೂಲಕ ನಮಗೆ ಸ್ವಾತಂತ್ರ್ಯ ದೊರಕಿದೆ. ಅವರ ವೀರ ಮರಣವನ್ನು ನೆನಪಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡುವ, ಪರಸ್ಪರ ಪ್ರೀತಿ ವಿಶ್ವಾಸ ಬೆಳೆಸುವ ಒಳ್ಳೆಯ ಪ್ರಜೆಗಳಾಗಿ ಬಾಳೋಣ ಎಂದರು.
ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ ಎಂ. ಶಹೀದ್ ತೆಕ್ಕಿಲ್ ಮಾತನಾಡಿ ನಮಗೆ ಹಲವಾರು ಮಹನೀಯರ ತ್ಯಾಗ ಬಲಿದಾನದ ಮೂಲಕ ಸಿಕ್ಕಿದ ಸ್ವಾತಂತ್ರ್ಯ ನಾವೆಲ್ಲರೂ ಪರಸ್ಪರ ಪ್ರೀತಿ ವಿಶ್ವಾಸ ಬೆಳೆಸುವ ಮೂಲಕ ಬಲಿಷ್ಟ ಭಾರತ ಕಟ್ಟೋಣ. ಪರಸ್ಪರ ಉತ್ತಮ ಸಂಬಂಧ ಬೆಳೆಸೋಣ. ಸೌಹಾರ್ದ ಸುಂದರ ನಾಡು ಕಟ್ಟೋಣ ಎಂದು ಶುಭ ಹಾರೈಸಿದರು.
ಪಂಚಾಯತ್ ಅಬಿವೃದಿ ಅಧಿಕಾರಿ ಸರಿತಾ ಡಿಸೋಜ ಮಾತನಾಡಿ ಎಲ್ಲರಿಗೂ ಶುಭಾಶಯ ಸಲ್ಲಿಸಿ ಈ ದಿನ ನಮಗೆಲ್ಲರಿಗೂ ಸಂಭ್ರಮದ ದಿನ ನಾವೆಲ್ಲರು ಸೇರಿ ಸುಂದರ ಸೌಹಾರ್ದ ಭಾರತ ಕಟ್ಟೋಣ ಬಲಿಷ್ಟ ಭಾರತ ಕಟ್ಟೋಣ ಎಂದರು ಹಾಗೂ ಈ ದಿನ ನಾವೆಲ್ಲರು ಸರಕಾರಾದ ನಿರ್ದೇಶನ ಪ್ರಕಾರ ಗ್ರಾಮ ಸಭೆ ಇದೆ. ಆದರಲ್ಲಿ ಭಾಗವಹಿಸಿ ಎಂದರು
ಕಾರ್ಯಕ್ರಮದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಗ್ರಾಮ ಪಂಚಾಯತ್ ಸದಸ್ಯರಾದ ಸೋಮಶೇಖರ್ ಕೆ. ಆರ್. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರುಗಳಾದ ಜಗದೀಶ್ ರೈ, ಸುಂದರಿ ಮುಂಡಡ್ಕ ಸದಸ್ಯರು ಗಳಾದ ವಿಮಲಾ ಪ್ರಸಾದ್, ಲಿಸ್ಡಿ ಮೊನಾಲಿಸಾ, ಅನುಪಮ, ಸುಶೀಲ , ಮಾಜಿ ಪಂಚಾಯತ್ ಅಧ್ಯಕ್ಷರು ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಯಮುನಾ ಬಿ. ಎಸ್. ಕಾರ್ಮಿಕ ಕಲ್ಯಾಣ ಮಂಡಳಿ ಸದಸ್ಯರಾದ ಕೆ. ಪಿ. ಜೋನಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಗಳಾದ ತಾಜ್ ಮಹಮ್ಮದ್, ನಾಗೇಶ ಪಿ. ಆರ್ , ಚಂದ್ರಶೇಖರ್ ಕಡೆಪಾಲ ಲೂಕಸ್ ಟಿ. ಐ. . ಸೊಸೈಟಿ ನಿರ್ದೇಶಕರಾದ ಗಣಪತಿ ಭಟ್ ಪಿ. ಎನ್. ಜಗದೀಶ್ ನಾಯ್ಕ್, ಪ್ರಮೀಳಾ ಪೆಲ್ತಡ್ಕ, ಉಷಾ ರಾಮ್ ನಾಯ್ಕ್,. ನಿವೃತ ಅಗ್ನಿಶಾಮಕ ದಳದ ಸಬ್ ಇನ್ಸ್ಪೆಕ್ಟರ್ ರಾಜ್ ಗೋಪಾಲ್ ಉಳುವಾರು. ಸ್ವಚ್ಛತಾ ಸಮಿತಿ ಕಾರ್ಯದರ್ಶಿ ಮಂಜುನಾಥ್ . ವಕೀಲರಾದ ಡೊಮಿನಿಕ್ ದಂಡೆಕಜೆ ಕಾರ್ಮಿಕ ಮುಖಂಡ ತ್ಯಾಗರಾಜ್, ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ರಾದ ಕೇಶವ ಬಂಗ್ಲೆ ಗುಡ್ಡೆ, ಕೃಷ್ಣ ಪ್ರಸಾದ್ ಕಾಪಿಲ ಪಂಚಾಯತ್ ಸಿಬ್ಬಂದಿ ಗೊಪಮ್ಮ ಮಧುರ , ಭರತ್, ಉಮೇಶ್, ಬೋಜಪ್ಪ, ನಸೀಮಾ, ಸವಿತಾ ಕಿಶೋರ್, ಸೊಸೈಟಿ ಸಿಬ್ಬಂದಿ ಭಾರತಿ.ಸಂಜೀವಿನಿ ಒಕ್ಕೂಟದ ಎಂ ಬಿ. ಕೆ. ಕಾಂತಿ ಬಿ. ಎಸ್. ಸೌಮ್ಯ, ಭಾರತಿ ಆಶಾ ಕಾರ್ಯಕರ್ತೆ ಸವಿತಾ ರೈ, ಕಲ್ಲುಗುಂಡಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷರಾದ ಅಬೂಬಕ್ಕರ್ ಹಸೈನಾರ್ ದೊಡ್ಡಡ್ಕ ಶ್ರೀಧರ್ ಸಂಪಾಜೆ, ಧರ್ಮಸ್ಥಳ ಸಂಘದ ಜಯ ಲಕ್ಷ್ಮಿ ಚಿದಾನಂದ ಮೂಡನಕಜೆ ಕೆ.ಪಿ.ಮಹಮದ್ ಕಾನಕೋಡ್,ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್ ಕೆ ಹನೀಫ್ ಎಲ್ಲರನ್ನು ಸ್ವಾಗತಿಸಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಜಿ ಕೆ ಹಮೀದ್ ಗೂನಡ್ಕ ವಂದಿಸಿದರು ಕಾರ್ಯಕ್ರಮದ ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ಹಾಗೂ ಅಂಬೇಡ್ಕರ್ ಭಾವ ಚಿತ್ರ ಇರಿಸಲಾಗಿತ್ತು ಕಲ್ಲುಗುಂಡಿ ಸವೇರಪುರ ಶಾಲಾ ಮಕ್ಕಳಿಂದ ಪ್ರಾರ್ಥನೆ ನಡೆಯಿತು.