ನಿವೃತ್ತಿ ಹೊಂದಿದ ಸುಳ್ಯ ತಾಲೂಕು ವೈದ್ಯಾಧಿಕಾರಿ ಡಾ.ನಂದಕುಮಾರ್ ರವರಿಗೆ ಸೂಡ ಅಧ್ಯಕ್ಷರಿಂದ ಗೌರವಾರ್ಪಣೆ…

ಸುಳ್ಯ: ಮಾ. 31 ರಂದು ಸೇವಾ ನಿವೃತ್ತಿ ಹೊಂದಿದ ತಾಲೂಕು ವೈದ್ಯಾಧಿಕಾರಿ ಡಾ. ನಂದಕುಮಾರ್ ರವರಿಗೆ ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ ಸನ್ಮಾನಿಸಿ ಗೌರವಿಸಿದರು.
ಸುಳ್ಯ ತಾಲೂಕು ವೈದ್ಯಾಧಿಕಾರಿಯಾಗಿ ತಾಲೂಕಿನ ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಿ ಸಾರ್ವಜನಿಕರ ಪ್ರಶoಸೆಗೆ ಪಾತ್ರರಾದ, ಕೋವಿಡ್ ಸಂದರ್ಭದಲ್ಲಿ ತನ್ನ ಜನ ಪರ ಕಾಳಜಿಯಿಂದ ತನ್ನ ಜೀವವನ್ನು ಲೆಕ್ಕಿಸದೆ ತಕ್ಷಣ ಸ್ಪಂದಿಸಿ ಇಡೀ ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ಒಗ್ಗೂಡಿಸಿ ಮಾಡಿದ ಸೇವೆ ಸುಳ್ಯದ ಜನತೆ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ ಈ ಸಂದರ್ಭದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಶರೀಫ್ ಜಟ್ಟಿಪ್ಪಳ್ಳ, ತಾಲೂಕು ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಶಾಹಿದ್ ಪಾರೆ ಉಪಸ್ಥಿತರಿದ್ದರು.