ಪೇರಡ್ಕ ಗೂನಡ್ಕ – ಸಂಭ್ರಮದ ಈದುಲ್ ಫಿತ್ರ್…

ಸುಳ್ಯ: ಇತಿಹಾಸ ಪ್ರಸಿದ್ದ ಅತಿ ಪುರಾತನ ಪೇರಡ್ಕ ಗೂನಡ್ಕ ಮೋಹಿಯದ್ದಿನ್ ಜುಮ ಮಸ್ಜಿದ್ ಖತೀಬ್ ಉಸ್ತಾದರಾದ ನಹೀಮ್ ಫೈಜಿ ಅಲ್ ಮಹಬರಿ ಈದ್ ಸಂದೇಶ ನೀಡಿ ಕೋಮು ಸೌಹಾರ್ದತೆ, ಕುಟುಂಬ ಜೀವನ, ರಂಜಾನ್ ಪಾವಿತ್ರತೆ ಬಗ್ಗೆ ತಿಳಿಸಿ ಪ್ಯಾಲೆಸ್ತೇನ್ ನಲ್ಲಿ ಮಕ್ಕಳು ಮಹಿಳೆಯರು ಹಿರಿಯರು ಸಹಿತ ಅಲ್ಲಿಯ ಜನತೆ ಅನುಭವಿಸುತ್ತಿರುವ ಕಷ್ಟವನ್ನು ನೆನೆದು ಅಲ್ಲಿಯ ರಂಜಾನ್ ಮತ್ತು ಹಬ್ಬದ ಆಚರಣೆಯ ಕಷ್ಟದ ಬಗ್ಗೆ ವಿವರಿಸಿ ಶಾಂತಿಗಾಗಿ ಪ್ರಾರ್ಥಿಸಿದರು.
ನಮಾಜ್ ಬಳಿಕ ಎಲ್ಲರು ಪರಸ್ಪರ ಶುಭಾಶಯ ಹಂಚಿದರು. ನಂತರ ಮರಣ ಹೊಂದಿದವರಿಗೆ ಖಬರ್ ಸ್ಥಾನದಲ್ಲಿ ಝಿಯಾರತ್ ಮತ್ತು ಪೇರಡ್ಕ ವಲಿಯುಲ್ಲಾಹಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ನಡೆಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್, ಪದಾಧಿಕಾರಿಗಳದ ಟಿ ಬಿ ಹನೀಫ್, ಪಿ ಕೆ ಉಮ್ಮರ್ ಗೂನಡ್ಕ,ತೆಕ್ಕಿಲ್ ಮೊಹಮದ್ ಕುಂಞಿ ಪೇರಡ್ಕ, ಪಾಂಡಿ ಉಸ್ಮಾನ್, ಸಿನಾನ್ ದರ್ಕಾಸ್, ಡಿ ಎ ಮೊಯಿದು ದರ್ಕಾಸ್ ಗೂನಡ್ಕ, ಭಾತಿಶ ತೆಕ್ಕಿಲ್ ಸೆಟ್ಟಿಯಡ್ಕ, ಎಂ ಆರ್ ಡಿ ಎ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ,ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷರಾದ ಮುನೀರ್ ಧಾರಿಮಿ, ಅಕ್ಬರ್ ಕರಾವಳಿ,ಪಾಂಡಿ ಅಬ್ಬಾಸ್ ನಿವೃತ್ತ ಅರಣ್ಯ ಅಧಿಕಾರಿ ಯೂಸುಫ್, ತಾಲೂಕು ಕಚೇರಿ ಸಿಬ್ಬಂದಿ ರಜಾಕ್ ಮೊದಲಾದವರು ಭಾಗವಹಿಸಿದರು.