ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ…

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭವು ಕಾಲೇಜಿನಲ್ಲಿ ನಡೆಯಿತು.
ಮಾತೃಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಘವು ನೂತನ ಆಡಳಿತ ಮಂಡಳಿಯ ಸದಸ್ಯರನ್ನು ಆರಿಸಿದ್ದು, ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರ ಸಮ್ಮುಖದಲ್ಲಿ ಜವಾಬ್ಧಾರಿಯನ್ನು ವಹಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಪ್ರಭಾಕರ್ ಭಟ್ ಅವರು ಸಮಾಜದಲ್ಲಿ ಅನೇಕ ಕೊರತೆಗಳಿವೆ, ಸಂಕಷ್ಟಗಳಿವೆ. ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವೆಲ್ಲಕ್ಕೂ ಪರಿಹಾರವನ್ನು ಹುಡುಕುವ ನಿಟ್ಟಿನಲ್ಲಿ ವಿವಿಧ ರೀತಿಯಲ್ಲಿ ಅಧ್ಯಯನವನ್ನು ಮಾಡಿ ಅದಕ್ಕೆ ಪೂರಕವಾದ ಸಂಶೋಧನೆಗಳು ನಡೆಯಬೇಕು. ಅದಕ್ಕಾಗಿ ನೂತನ ಸದಸ್ಯರು ಪ್ರಾಂಶುಪಾಲರ ಜತೆಗೂಡಿ ಉಪನ್ಯಾಸಕರನ್ನು ಮತ್ತು ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು ಎಂದರು. ನೂತನ ಆಡಳಿತ ಮಂಡಳಿಯ ಜವಾಬ್ದಾರಿಗಳನ್ನು ನೆನಪಿಸಿದ ಅವರು ಶುಭ ಹಾರೈಸಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್.ಪಿ, ನಿರ್ದೇಶಕ ಬಲರಾಮ ಆಚಾರ್ಯ.ಜಿ, ಮತ್ತು ಕೋಶಾಧಿಕಾರಿ ಅಚ್ಯುತ ನಾಯಕ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷರಾಗಿ ಪುತ್ತೂರು ದರ್ಭೆಯ ವಿಶ್ವಾಸ್ ಶೆಣೈ ಕೆ, ಸಂಚಾಲಕರಾಗಿ ಇಂಡಿಯನ್ ಸ್ಟೀಲ್ಸ್ ಎಂಡ್ ಮಾರ್ಬಲ್ಸ್ ನ ಸುಬ್ರಮಣ್ಯ ಭಟ್.ಟಿ.ಎಸ್, ಕೋಶಾಧಿಕಾರಿಗಳಾಗಿ ಮುಂಡೂರಿನ ಮುರಳೀಧರ ಭಟ್.ಬಿ, ನಿರ್ದೇಶಕರುಗಳಾಗಿ ವಿವಿಧ್ ಎನರ್ಜಿ ಸಿಸ್ಟಮ್ಸ್ ನ ರವಿಕೃಷ್ಣ.ಡಿ.ಕಲ್ಲಾಜೆ, ಮಹಾವೀರ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸುರೇಶ್ ಪುತ್ತೂರಾಯ, ಸುಳ್ಯ ತೊಡಿಕಾನದ ಸಂತೋಷ್ ಕುತ್ತುಮೊಟ್ಟೆ, ಕೆದಿಲ ವಾಳ್ತಜೆಯ ಸತ್ಯನಾರಾಯಣ.ಬಿ ಮತ್ತು ಸುಳ್ಯದ ಕೆವಿಜಿ ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ.ಯಶೋಧಾ ರಾಮಚಂದ್ರ ಆಯ್ಕೆಯಾಗಿದ್ದಾರೆ. ನಿರ್ಗಮಿತ ಸದಸ್ಯರಾದ ರಾಧಾಕೃಷ್ಣ ಭಕ್ತ, ಮಲ್ಲಿಕಾ ಪ್ರಸಾದ್, ಅಚ್ಯುತ ಪ್ರಭು ಮತ್ತು ಗೋಪಾಲಕೃಷ್ಣ ಹೇರಳೆ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು ಎಂದು ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ತಿಳಿಸಿದ್ದಾರೆ.

Sponsors

Related Articles

Back to top button