ತೆಕ್ಕಿಲ್ ಪ್ರೌಢಶಾಲೆಗೆ ಅಭಿನಂದನೆ…

ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು, ಶಿಕ್ಷಣಾಧಿಕಾರಿ ಹಾಗೂ ಪದನಿಮಿತ್ತ ತಾಲೂಕು ಯೋಜನಾಧಿಕಾರಿ ಕಚೇರಿ ಸುಳ್ಯ ವತಿಯಿಂದ ನಡೆದ ಸುಳ್ಯ ತಾಲೂಕು ಮಟ್ಟದ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನೋತ್ಸವ “ಶಿಕ್ಷಕರ ದಿನಾಚರಣೆ 2024” ರ ಸಮಾರಂಭದಲ್ಲಿ 2023-24 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶೇ. 100 ಫಲಿತಾಂಶ ದಾಖಲಿಸಿದ ತೆಕ್ಕಿಲ್ ಪ್ರೌಢಶಾಲೆ ಗೂನಡ್ಕ ಬೀಜದಕಟ್ಟೆ, ಸಂಸ್ಥೆಗೆ ಅಭಿನಂದನಾ ಸ್ಮರಣಕ್ಕೆ ನೀಡಿ ಗೌರವಿಸಲಾಯಿತು.
ಈ ಅಭಿನಂದನಾ ಸ್ಮರಣಿಕೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಸಂಪತ್ ಜೆ.ಡಿ ಇವರು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸದಾನಂದ ಮಾವಜಿ (ಅಧ್ಯಕ್ಷರು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ), ಚಂದ್ರಶೇಖರ ಪೆರಾಲು(ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಸುಳ್ಯ), ಬಿ.ಇ ರಮೇಶ್( ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳು,ಸುಳ್ಯ.) ಮತ್ತು ಶ್ರೀಮತಿ ಶೀತಲ್ ಯುಕೆ (ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು,ಸುಳ್ಯ) ಮೊದಲಾದ ಗಣ್ಯರು ಉಪಸ್ಥಿತರಿದ್ದರು.

Related Articles

Back to top button