ಹಿರಿಯ ಸಾಹಿತಿ, ಸಿನಿಮಾ ನಿರ್ಮಾಪಕ ಎನ್.ಎಸ್ ದೇವಿಪ್ರಸಾದ್ ಸಂಪಾಜೆ ನಿಧನ…
ಸುಳ್ಯ: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ಮಾಪಕ, ಅರೆಬಾಷೆ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಎನ್.ಎಸ್. ದೇವಿಪ್ರಸಾದ್(79 ) ನಿಧನರಾಗಿದ್ದಾರೆ.
ಅವರು ವಯೋಸಹಜ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಜ.3 ರಂದು ಸುಳ್ಯದ ಅಮರ ಶ್ರೀ ಭಾಗ್‌ನಲ್ಲಿ ನಡೆದ ಸಮಾರಂಭದಲ್ಲಿ ಅವರು 2019-20ನೇ ಸಾಲಿನ ಕರ್ನಾಟಕ ಅರೆಭಾಷೆ ಅಕಾಡೆಮಿಯ ಗೌರವ ಪ್ರಶಸ್ತಿ ಸ್ವೀಕರಿಸಿದ್ದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಪ್ರಥಮ ಅಧ್ಯಕ್ಷರಾಗಿದ್ದ ಎನ್.ಎಸ್.ದೇವಿಪ್ರಸಾದ್ ಸಾಹಿತಿಯಾಗಿ, ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾ ನಿರ್ಮಾಪಕರಾಗಿ ಪ್ರಸಿದ್ಧರಾಗಿದ್ದರು.
ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮೊಕೇಸ್ತರರಾಗಿದ್ದ ಅವರು ಪತ್ನಿ ಇಂದಿರಾ, ಮಗಳು ಸಹನಾ, ಪ್ರಜ್ಞಾ ಹಾಗೂ ಮೊಮ್ಮಕ್ಕಳು, ಬಂಧು ಮಿತ್ರರನ್ನು ಅಗಲಿದ್ದಾರೆ.