ಪುತ್ತೂರಿನಲ್ಲಿ ಕನಕದಾಸ ಜಯಂತಿ….
ಪುತ್ತೂರು : ವೃತ್ತಿಯಲ್ಲಿ ಶ್ರದ್ಧೆ ಇದ್ದಾಗ ಮಾತ್ರ ಜಯ ಖಚಿತ ಎಂಬುವುದನ್ನು ತೋರಿಸಿ ಕೊಡುವ ಮೂಲಕ ವೃತ್ತಿ ನಿಷ್ಠೆಯ ದಾರಿ ತೋರಿರುವ, ತಾಳ್ಮೆ ಸಂಯಮ, ಮಾನವೀಯತೆ,ಮನುಷ್ಯತ್ವದ ಬಗ್ಗೆ ಅಲ್ಲದೆ ಒಳ ಶುದ್ಧತೆ ಹಾಗೂ ಅರಿಷಡ್ವರ್ಗಗಳ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಿರುವ ಕನಕದಾಸರ ತತ್ವಗಳನ್ನು ನಾವು ಅನುಸರಿಸುವುದೇ ಅವರಿಗೆ ನೀಡುವ ಗೌರವ ಎಂದು ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಗುಡ್ಡಪ್ಪ ಬಲ್ಯ ಅವರು ಹೇಳಿದರು.
ಪುತ್ತೂರು ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶುಕ್ರವಾರ ಪುತ್ತೂರು ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಅವರು ಸಂಸ್ಮರಣಾ ಉಪನ್ಯಾಸ ನೀಡಿದರು.
ಎಲ್ಲಾ ಧರ್ಮಗಳ ವ್ಯಕ್ತಿಗಳ ದೇಹದಲ್ಲಿ ಆತ್ಮ ಮಾತ್ರ ಇರುವುದು, ಅದಕ್ಕೆ ಜಾತಿ ಕುಲವಿಲ್ಲ, ದೇವರಿಗೆ ಜಾತಿ ಇಲ್ಲ, ನೀತಿ ಮಾತ್ರ ಇರುವುದು ಎಂದು ತಿಳಿಸುವ ಕೆಲಸ ಮಾಡಿರುವ ಕನಕದಾಸರು ಸಮಾಜಕ್ಕೆ ಆದರ್ಶಗಳನ್ನು ಸಾರಿರುವ ದಾರ್ಶನಿಕರಾಗಿದ್ದಾರೆ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರಾದ ತಹಶೀಲ್ದಾರ್ ಅನಂತಶಂಕರ್ ಅವರು ಕನಕದಾಸರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆಯಿತ್ತರು.
ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್, ನಗರಸಭೆಯ ಪೌರಾಯುಕ್ತೆ ರೂಪಾ ಶೆಟ್ಟಿ ಉಪಸ್ಥಿತರಿದ್ದರು. ಉಪತಹಶೀಲ್ದಾರ್ ದಯಾನಂದ್ ಸ್ವಾಗತಿಸಿ, ವಂದಿಸಿದರು.