ಈಟ್ ಇನ್ ವೆಜ್ ಹೋಟೆಲ್ 9ನೇ ಶಾಖೆ ಇಂದಿರಾನಗರದಲ್ಲಿ ಸಲೀಂ ಅಹಮದ್ ರವರಿಂದ ಉದ್ಘಾಟನೆ …
ಬೆಂಗಳೂರು: ಫ್ಯಾಡ್ಕೊ ರವರ 9 ನೇ ಶಾಖೆ ಈಟ್ ಇನ್ ವೆಜ್ ಹೋಟೆಲ್ ಮತ್ತು ಐಸ್ ಕ್ರೀಮ್ ಪಾರ್ಲರ್ ಅನ್ನು ಇಂದಿರಾನಗರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್ ರವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಅತೀ ಶಿಘ್ರದಲ್ಲಿ 100ಕ್ಕು ಹೆಚ್ಚು ಮಳಿಗೆಗಳನ್ನು ತೆರೆಯುವಂತಾಗಲಿ ಎಂದು ನೂತನ ಮಳಿಗೆಗೆ ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷರಾದ ವಿಧಾನ ಪರಿಷತ್ ಮುಖ್ಯ ಸಚೇತಕರಾದ ಎಂ ನಾರಾಯಣಸ್ವಾಮಿಮಾತನಾಡಿ ಸಂಸ್ಥೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾದ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ರವರು ಯುವಕರ ಕಾರ್ಯವೈಖರಿಯನ್ನು ಮೆಚ್ಚಿ ಯುವಕರು ಸ್ವಉದ್ಯೋಗದ ಜೊತೆ ಸಮಾಜಸೇವೆಯಲ್ಲಿ ನಿರತರಾಗುವುದು ಉತ್ತಮ ಸಮಾಜ ನಿರ್ಮಾಣದ ಮುನ್ಸೂಚನೆ ಎಂದು ಪ್ರಶಂಸಿದರು.
ಈ ಸಂದರ್ಭದಲ್ಲಿ ಯುವ ಮಾಲಕರಾದ ತೌಸೀರ್ ದರ್ಬೆ,ಅಶ್ರಫ್ ದರ್ಬೆ , ಎಂ ಎ ಸಯ್ಯದ್ ,ಝಕಾರಿಯಾ ಸಂಪ್ಯ, ಮೊಹಿಯುದ್ದೀನ್, ಹರ್ಷದ್ ದರ್ಬೆ, ಬಷೀರ್ ದರ್ಬೆ , ಜಿಹಾದ್ ದರ್ಬೆ ,ಸಿಯಾನ್ ದರ್ಬೆ ,ಮೋಹಜ್ ದರ್ಬೆ ಸಲ್ಮಾನ್ ದರ್ಬೆ, ಅಕ್ರಮ್,ಅಲ್ತಾಫ್ ,ಶಫೀಕ್ ಅಹಮ್ಮದ್ ,ಅನುಷ್,ಅಫ್ರಾನ್ ,ತೌಪೀಕ್, ಹಬೀಬ್ ,ಬಿಲಾಲ್,ಸಾಬಿತ್,ಅಯಾನ್,ಇಬ್ರಾಹಿಂ ಬಷೀರ್,ದುನಿಯಾ ಜೀವನ್ ,ಅಜರುದ್ದೀನ್ ಗೂನಡ್ಕ,ಅಯ್ಯುಬ್ ಗೂನಡ್ಕ ಮೊದಲಾದವರು ಉಪಸ್ಥಿತರಿದ್ದರು.
ಪೂಜಾ ಕಾವೇರಮ್ಮ ಹಾಗು ಶಾಹೀದಾ ಮೊಹಮ್ಮದ್ ಕಾರ್ಯಕ್ರಮವನ್ನು ನೀರೂಪಿಸಿದರು.