ಕೇಂದ್ರ ಸರಕಾರದ ಕೃಪಕಟಾಕ್ಷ ಇರುವ ಪ್ರಧಾನಿ ಮೋದಿ ಮಿತ್ರ ಅದಾನಿಯವರ ಸಮೂಹ ಸಂಸ್ಥೆ ಪಥನದತ್ತ – ಕೇಂದ್ರ ಸರಕಾರ ನೇರ ಹೊಣೆ…

ಕೆಪಿಸಿಸಿ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್ ನೇರ ಆರೋಪ…

ಸುಳ್ಯ: ಪ್ರದಾನ ಮಂತ್ರಿ ಮೋದಿಯವರ ಮಿತ್ರ ಭಾರತೀಯ ಜನತಾ ಪಕ್ಷದ ಮುಖ್ಯ ಧನ ಸಹಾಯಗಾರ ಅದಾನಿ ಸಮೂಹ ಸಂಸ್ಥೆಗೆ ಕೇಂದ್ರ ಸರಕಾರ ಕಾನೂನು ಚೌಕಟ್ಟು ಎಲ್ಲೆ ಮೀರಿ ಸಹಾಯ ಮಾಡಿದೆ. ಅದರ ಪರಿಣಾಮ ಇಂದು ದೇಶದ ಆರ್ಥಿಕ ಪರಿಸ್ಥಿತಿಗೆ ಹದೆಗೆಟ್ಟಿದೆ. ಇದಕ್ಕೆ ಬಿಜೆಪಿ ನೇರ ಹೊಣೆ ಎಂದು ಕೆಪಿಸಿಸಿ ವಕ್ತಾರರಾದ ಟಿ ಎಂ ಶಾಹಿದ್ ತೆಕ್ಕಿಲ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಸರಕಾರ ನಿರ್ಮಿಸಿದ ಮಂಗಳೂರಿನ ವಿಮಾನ ನಿಲ್ದಾಣ ಸಹಿತ ದೇಶದ ಹಲವು ವಿಮಾನ ನಿಲ್ದಾಣಗಳನ್ನು ಬಂದರುಗಳನ್ನು ಮತ್ತಿತರರ ಸರಕಾರಿ ಸಂಸ್ಥೆಗಳನ್ನು ಅದಾನಿಗೆ ಧಾರೆಯರೆದು ಕೊಟ್ಟು ಪಕ್ಷಕ್ಕೆ ಧನ ಸಂಗ್ರಹ ಮಾಡಿದ್ದೆ ಕೇಂದ್ರ ಸರಕಾರದ ಮಹಾ ಸಾಧನೆ. ನರೇಂದ್ರ ಮೋದಿಯವರು ದೇಶದ ಜನರ ಖಾತೆಗೆ 15 ಲಕ್ಷ ಹಾಕ್ತೇನೆ ಅಂತ ಹೇಳಿ ಪರೋಕ್ಷವಾಗಿ ಎಲ್ಲಾ ಹಣವನ್ನ ಅದಾನಿಯವರ ಖಾತೆಗೆ ಹಾಕಿದ್ದಾರೆ.
ಎಲ್ ಐ ಸಿ ಮತ್ತು ಎಸ್ ಬಿ ಐ ಸಹಿತ ಎಲ್ಲಾ ಹಣಕಾಸಿನ ಸಂಸ್ಥೆಗಳು ಅದಾನಿಯವರ ಅಣತಿಯಂತೆ ಕಾರ್ಯನಿರ್ವಹಿಸುತ್ತಿದೆ. ಆದುದರಿಂದ ದೇಶದ ಆರ್ಥಿಕತೆಗೆ ಧಕ್ಕೆ ಆಗಿದ್ದು ಇದಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ. ಅಮೇರಿಕಾದ ಫೋರೆನ್ಸಿಕ್ ಫೈನಾನ್ಸಿಯಲ್ ರೀಸರ್ಚ್ ನ ಹಿಲ್ಡನ್ಬರ್ಗ್ ಸಂಸ್ಥೆ ಆರೋಪಿಸಿದಂತೆ ಸಂಸ್ಥೆ 15% ಇರುವ ಆಸ್ತಿಯನ್ನು 85% ಸುಳ್ಳು ದಾಖಲೆ ಅಂಕಿ ಅಂಶಗಳನ್ನು ಆಸ್ತಿಯನ್ನು ಸೇರಿಸಿ 100% ಮಾಡಿದೆ ಎಂಬುವುದು ನಿಜವಾಗುತ್ತಿದ್ದು ಅದಾನಿ ಪ್ರಪಂಚದಲ್ಲಿ ಅತೀ ದೊಡ್ಡ ಶ್ರೀಮಂತ ವ್ಯಕ್ತಿ ಆಗುತ್ತಾರೆ ಎಂದು ಬಿಂಬಿಸಲು ಈ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ.ಕೇಂದ್ರ ಸರಕಾರ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾದಿಶರಿಂದ ತನಿಖೆ ನಡೆಸಿ ಸತ್ಯವನ್ನು ದೇಶದ ಜನತೆಗೆ ತಿಳಿಸುವ ಧೈರ್ಯ ತೋರಿಸಲಿ ಎಂದು ಸವಾಲು ಹಾಕಿದ್ದಾರೆ.
ಅನೇಕ ಉದ್ಯಮಿಗಳು ಬ್ಯಾಂಕಿಂಗ್ ಸೇವೆಯನ್ನು ದುರುಪಯೋಗ ಪಡಿಸಿ ದೇಶದಿಂದ ಪಲಾಯನ ಮಾಡಿ ವಿದೇಶದಲ್ಲಿ ಐಶಾರಾಮಿ ಜೀವನ ನಡೆಸುತ್ತಿದ್ದು, ಇದೆಲ್ಲಾ ಈ ದೇಶದ ಬಡವರ ಕಣ್ಣೀರಿನ ಹಣವಾಗಿದ್ದು ಇದನ್ನು ಅನುಭವಿಸುತ್ತಿರುವವರು ಕೇವಲ ಶ್ರೀಮಂತರು. ಸರಕಾರ ಧೈರ್ಯ ಇದ್ದರೆ ಅಂಬಾನಿ ಅದಾನಿ ಸಹಿತ ದೇಶದ ಎಲ್ಲಾ ಬಂಡವಾಳಶಾಹಿಗಳ ಐವತ್ತು ಶೇಕಡ ಅಸ್ತಿಯನ್ನು, ಹಣವನ್ನು ವಶಪಡಿಸಿ ದೇಶದ ಬಡವರಿಗೆ ಹಂಚಲು ಧೈರ್ಯ ತೋರಲು ಕೆಪಿಸಿಸಿ ವಕ್ತಾರರಾದ ಟಿ ಎಂ ಶಾಹಿದ್ ತೆಕ್ಕಿಲ್ ಕೇಂದ್ರ ಸರಕಾರಕ್ಕೆ ಸವಾಲೆಸೆಸಿದ್ದಾರೆ.

Sponsors

Related Articles

Back to top button